ಕೆಲಸ,ಶಾಲೆ ಶಿಕ್ಷಣ ಸೇರಿದಂತೆ ಬೇರೆ ಕೆಲಸಗಳಿಗೆ ವೀಡಿಯೊ ಕರೆ ಮಾಡ್ತಿದ್ದರೆ ಎಚ್ಚೆತ್ತುಕೊಳ್ಳಿ. ವೀಡಿಯೊ ಕರೆ ಮಾಡುವ ಗ್ರಾಹಕರು ಐಎಸ್‌ಡಿ ಶುಲ್ಕವನ್ನು ಪಾವತಿಸಬೇಕಾಗಬಹುದು ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಹೇಳಿದೆ.
ಆನ್‌ಲೈನ್ ವೀಡಿಯೊ ಕರೆಗಳಿಗೆ ಅಥವಾ ಝೂಮ್,ಮೈಕ್ರೋಸಾಫ್ಟ್, ಬ್ಲೂ ಜೀನ್ಸ್, ಜಿಯೋ ಮೀಟ್‌ನಂತಹ ಮೀಟಿಂಗ್ ಅಪ್ಲಿಕೇಶನ್‌ಗಳಿಗೆ ಗ್ರಾಹಕರು ಟೋಲ್-ಫ್ರೀ ಸಂಖ್ಯೆಗಳನ್ನು ಬಳಸದಿದ್ದರೆ, ಅವರ ಬಿಲ್ ಅಂತರರಾಷ್ಟ್ರೀಯ ಕರೆ ದರಕ್ಕೆ ಅನುಗುಣವಾಗಿ ಬರಬಹುದು ಎಂದು ಟೆಲಿಕಾಂ ಕಂಪನಿಗಳು ತಿಳಿಸಿವೆ.
ಟ್ರಾಯ್ ಆದೇಶದ ನಂತರ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಎಸ್ಎಂಎಸ್ ಮೂಲಕ ಸೂಚನೆ ಕಳುಹಿಸಿವೆ. ಈ ಅಪ್ಲಿಕೇಶನ್‌ಗಳಲ್ಲಿ ಡಯಲ್-ಇನ್ ವೈಶಿಷ್ಟ್ಯವನ್ನು ಬಳಸುವುದರಿಂದ, ವೀಡಿಯೊ ಕರೆಗಳ ಸಮಯದಲ್ಲಿ ಐಎಸ್‌ಡಿ ಶುಲ್ಕ ವಿಧಿಸಲಾಗುತ್ತದೆ ಎಂದು ಟೆಲಿಕಾಂ ಕಂಪನಿಗಳು ಹೇಳಿವೆ.
ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಮತ್ತು ಟೆಲಿಕಾಂ ಕಂಪನಿಗಳಿಗೆ ಅನೇಕ ದಿನಗಳಿಂದ ಹೆಚ್ಚಿನ ಬಿಲ್ ಬಗ್ಗೆ ದೂರು ಬಂದಿತ್ತು. ನಂತ್ರ ಟ್ರಾಯ್,ಎಸ್ಎಂಎಸ್ ಮೂಲಕ ಮಾಹಿತಿ ನೀಡಿದೆ.
ಅಂತರಾಷ್ಟ್ರೀಯ ಕರೆಗಳಿಗೆ ವಿಧಿಸುವ ಶುಲ್ಕವನ್ನು ಐ.ಎಸ್.ಡಿ. ಎನ್ನಲಾಗುತ್ತದೆ.