ರಾಷ್ಟ್ರ ರಾಜಧಾನಿ ಜನರಿಗೆ ದೆಹಲಿ ಸರ್ಕಾರ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ.
ಅರವಿಂದ್ ಕೇಜ್ರಿವಾಲ್ ಸರ್ಕಾರ ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಿದೆ. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕ್ಯಾಬಿನೆಟ್ ಸಭೆ ನಂತ್ರ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್ ಈ ವಿಷ್ಯವನ್ನು ತಿಳಿಸಿದ್ದಾರೆ. ಶೇಕಡಾ 30ರಿಂದ ಶೇಕಡಾ 16.75ಕ್ಕೆ ವ್ಯಾಟ್ ಇಳಿಕೆಯಾಗಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 81.94 ರೂಪಾಯಿಯಿದ್ದು, ವ್ಯಾಟ್ ಇಳಿಕೆ ನಂತ್ರ ದೆಹಲಿಯಲ್ಲಿ ಡೀಸೆಲ್ ಬೆಲೆ 73.64 ರೂಪಾಯಿಯಾಗಿದೆ.
ಡಿಸೇಲ್ ಬೆಲೆ ಸುಮಾರು 8.36 ರೂಪಾಯಿಯಷ್ಟು ಇಳಿಕೆ ಕಂಡಂತಾಗಿದೆ. ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಸಂಪುಟ ಈ ನಿರ್ಧಾರ ಕೈಗೊಂಡಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ. ಕೊರೊನಾ ಭಯದಲ್ಲಿದ್ದ ಜನರು ಈಗ ಕೆಲಸಕ್ಕೆ ಮರಳುತ್ತಿದ್ದಾರೆ. ವಾತಾವರಣ ಸುಧಾರಿಸುತ್ತಿದೆ. ಕೊರೊನಾ ಪ್ರಕರಣಗಳು ಸಹ ಕಡಿಮೆಯಾಗುತ್ತಿವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.