ಜನವರಿಯಲ್ಲಿ ಪ್ರಾರಂಭವಾದ ಚಿನ್ನದ ಬೆಲೆ ಏರಿಕೆ ಇನ್ನೂ ನಿಂತಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ಈ ವರ್ಷ 10 ಸಾವಿರ ರೂಪಾಯಿಗಳಷ್ಟು ಹೆಚ್ಚಾಗಿದೆ. ಹತ್ತು ಗ್ರಾಂ ಚಿನ್ನದ ಬೆಲೆ 50 ಸಾವಿರ ರೂಪಾಯಿ ತಲುಪಿದೆ. ಕೊರೊನಾ ವೈರಸ್ ಸಾಂಕ್ರಾಮಿಕದಿಂದ ದೇಶದ ಆರ್ಥಿಕತೆಯನ್ನು ಉಳಿಸಲು ಯುಎಸ್ ಸೇರಿದಂತೆ ವಿಶ್ವದ ಸೆಂಟ್ರಲ್ ಬ್ಯಾಂಕ್ ಪರಿಹಾರ ಪ್ಯಾಕೇಜ್‌ಗಳನ್ನು ಘೋಷಿಸುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಯುಎಸ್ ಡಾಲರ್ ದುರ್ಬಲವಾಗಿರುತ್ತದೆ. ಆದ್ದರಿಂದ ಚಿನ್ನದ ಬೆಲೆ ಹೆಚ್ಚಾಗುತ್ತದೆ.
ಭಾರತೀಯ ಬುಲಿಯನ್ ಮಾರುಕಟ್ಟೆಯಲ್ಲಿ ದೀಪಾವಳಿಯ ಮೊದಲು, ಚಿನ್ನದ ಬೆಲೆಗಳು ಪ್ರಸ್ತುತ ಹತ್ತು ಗ್ರಾಂಗೆ 2000 ರೂಪಾಯಿ ಹೆಚ್ಚಾಗುವ ಸಾಧ್ಯತೆಯಿದೆ. ಅಂದ್ರೆ ಹತ್ತು ಗ್ರಾಂ ಚಿನ್ನದ ಬೆಲೆ 52 ಸಾವಿರ ರೂಪಾಯಿಯಾಗಲಿದೆ. 2021 ರಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂಗೆ 65 ಸಾವಿರ ರೂಪಾಯಿಗಳನ್ನು ತಲುಪುವ ನಿರೀಕ್ಷೆಯಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಭಾರಿ ಆರ್ಥಿಕ ಹಿಂಜರಿತ ಉಂಟಾಗುತ್ತಿದೆ. ಇದರ ಚೇತರಿಕೆ ಬಹಳ ನಿಧಾನವಾಗಿ ಆಗಲಿದೆ. ಐಎಂಎಫ್ ಪ್ರಕಾರ, ಜಾಗತಿಕ ಉತ್ಪಾದನೆಯು ಶೇಕಡಾ 4.9 ಕ್ಕೆ ಕುಗ್ಗಲಿದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿನ ಬೆಳವಣಿಗೆಯ ದರವನ್ನು ಶೇಕಡಾ 3ಕ್ಕೆ ಇಳಿಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಖರೀದಿ ಹೆಚ್ಚಿಸಲಿದ್ದಾರೆ. ಇದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಲಿದೆ.
ಇನ್ನೊಂದು ಕೊರೊನಾ ಸಾಂಕ್ರಾಮಿಕದಿಂದ ಕೇಂದ್ರ ಬ್ಯಾಂಕುಗಳು ಮತ್ತು ಯುಎಸ್ ಸೇರಿದಂತೆ ಕೆಲ ದೇಶಗಳು ಪರಿಹಾರ ಪ್ಯಾಕೇಜ್‌ಗಳನ್ನು ಘೋಷಿಸಬಹುದು. ಆಗ ಯುಎಸ್ ಡಾಲರ್ ದುರ್ಬಲವಾಗಿರುತ್ತದೆ. ಆದ್ದರಿಂದ ಚಿನ್ನದ ಬೆಲೆ ಹೆಚ್ಚಾಗುತ್ತದೆ. ಮೂರನೇಯದಾಗಿ ಭಾರತ-ಚೀನಾ ಉದ್ವಿಗ್ನತೆ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಲಿದೆ.