ಎಲ್ಪಿಜಿ ಸಿಲಿಂಡರ್ ವಿತರಣೆ ವಿಧಾನ ಬದಲಾಗಲಿದೆ. ನವೆಂಬರ್ 1ರಿಂದ ಸಿಲಿಂಡರ್ ವಿತರಣೆ ನಿಯಮ ಬದಲಾಗಲಿದ್ದು, ಒಟಿಪಿ ಅನಿವಾರ್ಯವಾಗಿದೆ. ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಲಿವೆ.
ಸಿಲಿಂಡರ್ ಬುಕಿಂಗ್ ಗಾಗಿ ಇಂಡೇನ್ ಸಂಖ್ಯೆ ಬದಲಾಗಿದೆ. ಇಂಡೇನ್ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಹೊಸ ಸಂಖ್ಯೆಯನ್ನು ಕಳುಹಿಸುತ್ತಿದೆ. ಹೊಸ ನಂಬರ್ ನಲ್ಲಿ ಇನ್ಮುಂದೆ ಸಿಲಿಂಡರ್ ಬುಕ್ ಮಾಡಬೇಕು.
ಸಿಲಿಂಡರ್ ಬುಕ್ ಮಾಡಲು ನಾಲ್ಕು ಮಾರ್ಗಗಳನ್ನು ಅನುಸರಿಸಬಹುದು. ಗ್ಯಾಸ್ ಏಜೆನ್ಸಿ ಬಳಿ ಹೋಗಿ, ಮೊಬೈಲ್ ಮೂಲಕ, ಆನ್ಲೈನ್ ಮೂಲಕ ಮತ್ತು ಕಂಪನಿ ವಾಟ್ಸಾ ಪ್ ಸಂಖ್ಯೆ ಮೂಲಕ ಸಿಲಿಂಡರ್ ಬುಕ್ ಮಾಡಬಹುದು.
ಇಂಡೇನ್ ಗ್ರಾಹಕರಾಗಿದ್ದರೆ 7718955555 ಹೊಸ ಸಂಖ್ಯೆಗೆ ಕರೆ ಮಾಡಿ ಗ್ಯಾಸ್ ಬುಕ್ ಮಾಡಬೇಕು. ವಾಟ್ಸಾಪ್ ಮೂಲಕವೂ ಬುಕಿಂಗ್ ಮಾಡಬಹುದು. ವಾಟ್ಸಾಪ್ ಮೆಸೆಂಜರ್‌ನಲ್ಲಿ REFILL ಎಂದು ಟೈಪ್ ಮಾಡಿ ಮತ್ತು ಅದನ್ನು 7588888824 ಗೆ ಕಳುಹಿಸಿ. ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಾತ್ರ ಈ ಸಂದೇಶವನ್ನು ಕಳುಹಿಸಿ. ಇಂಡೇನ್ ಆ್ಯಪ್ ಡೌನ್‌ಲೋಡ್ ಮಾಡುವ ಮೂಲಕ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು.
ಡೆಲಿವರಿ ದೃಢೀಕರಣ ಕೋಡ್ ಕೂಡ ಜಾರಿಗೆ ಬರಲಿದೆ. ತೈಲ ಕಂಪನಿಗಳು 100 ಸಿಟಿಯಲ್ಲಿ ಒಟಿಪಿ ಜಾರಿಗೆ ತರ್ತಿವೆ. ಸಿಲಿಂಡರ್ ಕಾಯ್ದಿರಿಸಿದ ನಂತ್ರ ನಂಬರ್ ಗೆ ಒಟಿಪಿ ಬರುತ್ತದೆ. ಅದನ್ನು ಡೆಲಿವರಿ ಬಾಯ್ ಗೆ ತೋರಿಸಬೇಕು. ನಂತ್ರ ಸಿಲಿಂಡರ್ ಪಡೆಯಬೇಕಾಗುತ್ತದೆ.