ಅಮೆರಿಕದಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಎಂಬಾತನನ್ನು ಶ್ವೇತವರ್ಣದ ಪೊಲೀಸ್ ಅಧಿಕಾರಿಯೊಬ್ಬ ಅಮಾನುಷವಾಗಿ ಹತ್ಯೆ ಮಾಡಿದ ಬಳಿಕ ವರ್ಣಭೇದ ನೀತಿಯ ವಿರುದ್ಧ ಸಂಘರ್ಷ ಆರಂಭವಾಗಿದೆ.
ಅಲ್ಲದೆ ಇದೀಗ ಈ ವಿಚಾರ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದು, ಬಿಳಿ ಬಣ್ಣದವರು ಅತಿ ಸುಂದರವಾದವರು ಎಂಬಂತೆ ಬಿಂಬಿಸುವ ಜಾಹೀರಾತುಗಳ ಕುರಿತು ಆಕ್ರೋಶ ವ್ಯಕ್ತವಾಗುತ್ತಿದೆ.
ಹೀಗಾಗಿ ಜಾನ್ಸನ್ ಅಂಡ್ ಜಾನ್ಸನ್ ತ್ವಚೆ ಬಿಳುಪುಗೊಳಿಸುವ ಕ್ರೀಮ್ ಗಳ ಮಾರಾಟವನ್ನು ನಿಲ್ಲಿಸುವುದಾಗಿ ತಿಳಿಸಿದ್ದು, ಇದೀಗ ಯುನಿಲಿವರ್ ಕಂಪನಿ ತನ್ನ ‘ಫೇರ್ ಅಂಡ್ ಲವ್ಲಿ’ ಉತ್ಪನ್ನದ ಹೆಸರು ಬದಲಿಸಲು ನಿರ್ಧರಿಸಿದೆ. ‘ಫೇರ್’ ಪದ ಶ್ವೇತ ವರ್ಣವನ್ನು ಪ್ರತಿಬಿಂಬಿಸುತ್ತದೆ ಎಂಬ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ.