ಕೊರೊನಾ ಮಹಾಮಾರಿಯಿಂದ ಎಲ್ಲರಿಗೂ ನಷ್ಟವಾಗಿದೆ. ಅನೇಕ ಉದ್ಯಮಗಳು ಇಂದಿಗೂ ಚೇತರಿಕೆ ಕಾಣುತ್ತಿಲ್ಲ. ಯಾವುದರ ಮೇಲೆ ಹೂಡಿಕೆ ಮಾಡಬೇಕು ಎಂಬ ಗೊಂದಲದಲ್ಲಿಯೇ ಹೂಡಿಕೆದಾರರು ಇದ್ದಾರೆ. ಇದರ ಮಧ್ಯೆ ಇದೀಗ ಎನ್‌ಎಎ ಬಿಲ್ಡರ್‌ಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದೆ.
ಹೌದು, ಜಿಎಸ್‌ಟಿ ಜಾರಿಗೆ ಬಂದ ನಂತರವೂ ಫ್ಲ್ಯಾಟ್‌ಗಳ ಬೆಲೆ ಕಡಿಮೆಯಾಗಬೇಕಿತ್ತು. ಆದರೆ ಈ ಕೆಲಸ ಆಗಿಲ್ಲ. ಹೀಗಾಗಿ ಬಿಲ್ಡರ್‌ಗಳಿಗೆ ಛಾಟಿ ಏಟು ನೀಡಲು ರಾಷ್ಟ್ರೀಯ ಲಾಭೋದ್ದೇಶ ವಿರೋಧಿ ಪ್ರಾಧಿಕಾರ ಮುಂದಾಗಿದೆ. ಫ್ಲ್ಯಾಟ್‌ಗಳ ಬೆಲೆಯನ್ನು ಕಡಿಮೆ ಮಾಡದ ಬಿಲ್ಡರ್‌ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಇಲ್ಲಿಯವರೆಗೆ ಇಬ್ಬರು ಬಿಲ್ಡರ್‌ಗಳಿಗೆ ಆದೇಶ ಹೊರಡಿಸಿದೆ.
ಇಲ್ಲಿಯವರೆಗೆ ಶೇ.80ರಷ್ಟು ಪ್ರಕರಣಗಳಲ್ಲಿ ಬಿಲ್ಡರ್‌ಗಳು ದೋಷಿಗಳೆಂದು ಪರಿಗಣಿಸಲಾಗಿದೆ. ಈ ಬಿಲ್ಡರ್‌ಗಳು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್‌ನಲ್ಲಿ ಬರುವ ಲಾಭವನ್ನು ತಾವೇ ಪಡೆದುಕೊಂಡಿದ್ದಾರೆ. ಈ ಲಾಭಾಂಶವನ್ನು ಮನೆ ಖರೀದಿದಾರರಿಗೆ ಕೊಟ್ಟಿಲ್ಲ. ಹೀಗಾಗಿ ಅವರ ಮೇಲೆ ಪ್ರಾಫಿಟಿಯರಿಂಗ್ ಚಾರ್ಜ್ ಹಾಕಲಾಗಿದೆ.