ಸಾಮಾಜಿಕ ಜಾಲತಾಣ ಫೇಸ್ ಬುಕ್ ಇಂದು ಜನಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಫೇಸ್ಬುಕ್ ಜನತೆಗೆ ಉತ್ತಮ ಮಾಹಿತಿಗಳನ್ನು ನೀಡುವುದರ ಜೊತೆಗೆ ಅದರ ದುರ್ಬಳಕೆಯೂ ಹೆಚ್ಚಾಗುತ್ತಿದೆ.
ಇದರ ಮಧ್ಯೆ ಮತ್ತೊಂದು ಮಹತ್ವದ ಸಂಗತಿ ಹೊರಬಿದ್ದಿದ್ದು, ವಿಶ್ವದಾದ್ಯಂತ 45 ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎನ್ನಲಾಗಿದೆ. ಈ ಮಾಹಿತಿಗಳು ಈಗಾಗಲೇ ಡಾರ್ಕ್ ವೆಬ್ ನಲ್ಲಿ ಮಾರಾಟಕ್ಕೆ ಲಭ್ಯವಿರುವುದು ಆಘಾತಕಾರಿಯಾಗಿದೆ.
ʼಆಧಾರ್ʼ ಲಾಕ್ – ಅನ್ಲಾಕ್ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ
ಸೋರಿಕೆಯಾಗಿರುವ ಫೇಸ್ಬುಕ್ ಬಳಕೆದಾರರ ಮಾಹಿತಿ ಪೈಕಿ 61 ಲಕ್ಷ ಖಾತೆಗಳು ಭಾರತೀಯರದ್ದಾಗಿದ್ದು, ಹೀಗಾಗಿ ಬಳಕೆದಾರರು ತಮ್ಮ ಖಾತೆಯ ಸೆಟ್ಟಿಂಗ್ಸ್ ಗಳನ್ನು ಭದ್ರಪಡಿಸಿಕೊಳ್ಳಲು ಮುಂದಾಗಬೇಕು ಎಂದು ಸೈಬರ್ ಸುರಕ್ಷತಾ ಸಂಸ್ಥೆ ಸಿಇಆರ್ ಟಿ-ಇನ್ ಸಲಹೆ ಮಾಡಿದೆ.