ರಾಜಕೀಯ ಮತ್ತು ಚುನಾವಣಾ, ಸಾಮಾಜಿಕ ಸಮಸ್ಯೆಗಳನ್ನು ಪ್ರಚಾರ ಮಾಡುವ ಪಕ್ಷಗಳ ಪಟ್ಟಿಯಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ.
ಕಳೆದ 18 ತಿಂಗಳಲ್ಲಿ ಬಿಜೆಪಿ 4.61 ಕೋಟಿಗೂ ಹೆಚ್ಚು ಜಾಹೀರಾತು ನೀಡಿದೆ. ಕಾಂಗ್ರೆಸ್ 1.84 ಕೋಟಿ ಜಾಹೀರಾತು ನೀಡಿದೆ.
ಫೇಸ್ಬುಕ್‌ಗೆ ಜಾಹೀರಾತು ನೀಡುವ ಟಾಪ್ 10 ಕಂಪನಿಗಳಲ್ಲಿ 4 ಬಿಜೆಪಿಯೊಂದಿಗೆ ಸಂಬಂಧ ಹೊಂದಿವೆ. ಈ ಎಲ್ಲಾ ಕಂಪನಿಗಳ ಕಚೇರಿ ವಿಳಾಸವನ್ನು ಸಹ ಅಲ್ಲಿ ತೋರಿಸಲಾಗಿದೆ. ಇದು ಬಿಜೆಪಿಯ ದೆಹಲಿ ಪ್ರಧಾನ ಕಚೇರಿಯ ವಿಳಾಸ ಹೊಂದಿದೆ.
MY First vote for modi 1.39 ಕೋಟಿ ಖರ್ಚು ಮಾಡಿದೆ. Bharat ke man ki baat 2.24 ಕೋಟಿ ಖರ್ಚು ಮಾಡಿದೆ. ನೇಷನ್ ವಿತ್ ನಮೋ 1.28 ಕೋಟಿ ಖರ್ಚು ಮಾಡಿದೆ.
ಇವೆಲ್ಲವೂ ಸುದ್ದಿ ಮಾಧ್ಯಮ ವೆಬ್ಸೈಟ್ ಎಂದು ಹೇಳಿಕೊಂಡಿವೆ. ಇದ್ರಲ್ಲಿ ಒಂದು ಬಿಜೆಪಿ ನಾಯಕ ಆರ್.ಕೆ ಸಿನ್ಹಾ ಅವರೊಂದಿಗೆ ಸಂಬಂಧ ಹೊಂದಿದೆ. ಅದು 0.65 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.
ಈ ಎಲ್ಲ ಕಂಪನಿಗಳ ಹಣವೂ ಸೇರಿದಂತೆ ಬಿಜೆಪಿ ಒಟ್ಟು 10.17 ಕೋಟಿ ರೂಪಾಯಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಖರ್ಚು ಮಾಡಿದೆ. ಟಾಪ್ 10 ಕಂಪನಿಗಳಿಂದ ಫೇಸ್‌ಬುಕ್ ಪಡೆದ ಒಟ್ಟು 15.81 ಕೋಟಿ ಜಾಹೀರಾತಿನ ಶೇಕಡಾ 60 ರಷ್ಟು ಬಿಜೆಪಿಯದ್ದು. ಇದ್ರಲ್ಲಿ ದೆಹಲಿಯ ಆಮ್ ಆದ್ಮಿ ಪಾರ್ಟಿ ಕೂಡ ಸೇರಿದೆ. ಇದು ಫೇಸ್‌ಬುಕ್‌ನಲ್ಲಿ ಜಾಹೀರಾತಿಗೆ 69 ಲಕ್ಷ ರೂಪಾಯಿ ಖರ್ಚು ಮಾಡಿದೆ.