ಮೊಬೈಲ್ ಬಳಕೆ ಇಂದು ಅನಿವಾರ್ಯವಾಗಿದೆ. ಬಹುತೇಕರು ಎರಡಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್ ಗಳನ್ನು ಹೊಂದಿದ್ದು, ಕಛೇರಿ ಕೆಲಸಕ್ಕೆ ಹಾಗೂ ಖಾಸಗಿ ಕಾರ್ಯಗಳಿಗೆ ಪ್ರತ್ಯೇಕವಾಗಿ ಬಳಸುತ್ತಿದ್ದಾರೆ.
ಟೆಲಿಕಾಂ ಕಂಪನಿಗಳು ಪ್ರಿ ಪೇಯ್ಡ್ ಬಳಕೆದಾರರಿಗಿಂತ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ನೀಡುತ್ತಾರೆ. ಹೀಗಾಗಿ ಕೆಲ ಪ್ರಿ ಪೇಯ್ಡ್ ಬಳಕೆದಾರರು ಪೋಸ್ಟ್ ಪೇಯ್ಡ್ ಗೆ ಬದಲಾಗಲು ಮುಂದಾಗುತ್ತಾರೆ. ಅಂತಹ ಸಂದರ್ಭದಲ್ಲಿ ಈವರೆಗೆ ಹೆಚ್ಚಿನ ಸಮಯ ತಗುಲುತ್ತಿತ್ತು.
ಇದೀಗ ದೂರಸಂಪರ್ಕ ಇಲಾಖೆ ಹೊಸ ಮಾರ್ಗಸೂಚಿ ಸಿದ್ಧಪಡಿಸಿದ್ದು, ಕೇವಲ ಒಂದು ಒಟಿಪಿಯಲ್ಲಿ ನೀವು ಪ್ರಿಪೇಯ್ಡ್ ಪ್ಲಾನ್ ನ್ನು ಪೋಸ್ಟ್ ಪೇಯ್ಡ್ ಪ್ಲಾನ್ ಆಗಿ ಬದಲಿಸಬಹುದಾಗಿದೆ. ಒಂದರಿಂದ ಎರಡು ವಾರಗಳಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆಯಾಗಲಿದ್ದು, ಆ ಬಳಿಕ ಮರುಪರಿಶೀಲನೆಗೆ ಗ್ರಾಹಕರು ಟೆಲಿಕಾಂ ಕಂಪನಿಗೆ ಹೋಗಬೇಕಾಗಿಲ್ಲ.