ಪೇಟಿಎಂ ಬಳಕೆದಾರರಿಗೆ ಕೆಟ್ಟ ಸುದ್ದಿಯಿದೆ. ಕಿರಾಣಿ ಅಂಗಡಿಗಳಿಂದ ಸರಕುಗಳನ್ನು ಖರೀದಿಸಲು, ನೀರು ಮತ್ತು ವಿದ್ಯುತ್ ಬಿಲ್ ಪಾವತಿಸಲು, ಬುಕ್ ಗ್ಯಾಸ್ ಸಿಲಿಂಡರ್‌ಗಳು, ರೀಚಾರ್ಜ್ ಮೊಬೈಲ್ ಮತ್ತು ಡಿಟಿಎಚ್ ಅಥವಾ ಆನ್‌ಲೈನ್ ಪಾವತಿಗಳಿಗಾಗಿ ಪೇಟಿಎಂ ವಾಲೆಟ್ ಬಳಸುತ್ತಿದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ. ಪೇಟಿಎಂ ಬಳಸುವುದು ಇಂದಿನಿಂದ ದುಬಾರಿಯಾಗಿದೆ.
ಕ್ರೆಡಿಟ್ ಕಾರ್ಡ್‌ನಿಂದ ಪೇಮೆಂಟ್ ವಾಲೆಟ್ ಗೆ ಹಣವನ್ನು ಲೋಡ್ ಮಾಡಲು ಯಾವುದೇ ಹೆಚ್ಚುವರಿ ಶುಲ್ಕವಿರಲಿಲ್ಲ. ಆದರೆ ಈಗ ಕಂಪನಿಯು ನಿಯಮಗಳನ್ನು ಬದಲಾಯಿಸಿದೆ. ಮಾಹಿತಿ ಪ್ರಕಾರ, ಅಕ್ಟೋಬರ್ 15 ರಿಂದ ಪೇಟಿಎಂ ವಾಲೆಟ್ ಗೆ ಕ್ರೆಡಿಟ್ ಕಾರ್ಡ್‌ನಿಂದ ಹಣ ವರ್ಗಾವಣೆ ಮಾಡಿದ್ರೆ ಶೇಕಡಾ 2 ರಷ್ಟು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಶೇಕಡಾ 2ರಷ್ಟು ಶುಲ್ಕದಲ್ಲಿ ಜಿಎಸ್‌ಟಿ ಸೇರಿರುತ್ತದೆ. ಕ್ರೆಡಿಟ್ ಕಾರ್ಡ್‌ನಿಂದ ಪೇಟಿಎಂ ವಾಲೆಟ್ 100 ರೂಪಾಯಿಗಳನ್ನು ವರ್ಗಾಯಿಸಿದ್ರೆ 102 ರೂಪಾಯಿ ಪಾವತಿಸಬೇಕಾಗುತ್ತದೆ.
ಕಂಪನಿಯು ಪ್ರಸ್ತುತ ಕ್ರೆಡಿಟ್ ಕಾರ್ಡ್‌ನಿಂದ ಪೇಟಿಎಂಗೆ ಹಣ ವರ್ಗಾವಣೆ ಮಾಡಿದ್ರೆ ಶೇಕಡಾ 1 ರಷ್ಟು ಕ್ಯಾಶ್‌ಬ್ಯಾಕ್ ನೀಡುತ್ತದೆ. ವ್ಯಾಪಾರಿ ಸೈಟ್ ನಿಂದ ಪೇಟಿಎಂಗೆ ಹಣ ವರ್ಗಾವಣೆ ಮಾಡಿದ್ರೆ ಯಾವುದೇ ಶುಲ್ಕ ವಿಧಿಸಬೇಕಾಗಿಲ್ಲ.