
ಇಂದಿನಿಂದ ಹಲವು ಬದಲಾವಣೆಗಳು ಆಗಲಿದ್ದು, ಇವುಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತವೆ.
ಈ ಪೈಕಿ ಪೆಟ್ರೋಲ್ ಬಂಕ್ ನಲ್ಲಿ ಕ್ರೆಡಿಟ್ ಕಾರ್ಡ್ ಬಳಸುವ ಸಂಗತಿಯೂ ಒಂದು. ಈವರೆಗೆ ಪೆಟ್ರೋಲ್ ಬಂಕ್ ನಲ್ಲಿ ಹಣ ಪಾವತಿಗೆ ಕ್ರೆಡಿಟ್ ಕಾರ್ಡ್ ಬಳಸಿದ ವೇಳೆ ಪಾಯಿಂಟ್ಸ್ ಆಧಾರದ ಮೇಲೆ ಡಿಸ್ಕೌಂಟ್ ಲಭ್ಯವಾಗುತ್ತಿತ್ತು.
ಆದರೆ ಇಂದಿನಿಂದ ಆ ನಿಯಮ ಬದಲಾಗಿದ್ದು, ಗ್ರಾಹಕರು ಪೆಟ್ರೋಲ್ ಹಾಗೂ ಡೀಸೆಲ್ ಹಾಕಿಸಿಕೊಂಡ ವೇಳೆ ಹಣ ಪಾವತಿಗೆ ಕ್ರೆಡಿಟ್ ಕಾರ್ಡ್ ಬಳಸಿದರೂ ಸಹ ಯಾವುದೇ ಡಿಸ್ಕೌಂಟ್ ಲಭ್ಯವಾಗುವುದಿಲ್ಲ.