ಕೊರೊನಾ, ಲಾಕ್ ಡೌನ್ ಸಮಯದಲ್ಲಿ ಜನರು ನಗದು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲಸವಿಲ್ಲದ ಕಾರಣ ಜನರಿಗೆ ತೊಂದರೆಯಾಗ್ತಿದೆ. ಈ ಜನರಿಗೆ ಇಪಿಎಫ್ ವರದಾನವಾಗಿದೆ. ಕಳೆದ ಎರಡು ತಿಂಗಳಿಂದ ಲಕ್ಷಾಂತರ ಜನರು ಪಿಎಫ್ ಹಣವನ್ನು ವಾಪಸ್ ಪಡೆಯುತ್ತಿದ್ದಾರೆ. ಆದ್ರೆ ಈ ಸಂದರ್ಭದಲ್ಲಿ ಮಾಡುವ ತಪ್ಪುಗಳಿಂದಾಗಿ ಪಿಎಫ್ ಹಣ ಸರಿಯಾದ ಸಮಯಕ್ಕೆ ಜನರಿಗೆ ಸಿಗ್ತಿಲ್ಲ. ಪಿಎಫ್ ಹಣ ಪಡೆಯಲು ಮೊದಲು ಬ್ಯಾಂಕ್ ಖಾತೆ ಅಥವಾ ಐ ಎಫ್ ಎಸ್ ಸಿ ವಿವರಗಳನ್ನು ಸರಿಯಾಗಿ ನೀಡಬೇಕು. ವಿವರಗಳು ಸರಿಯಾಗಿಲ್ಲದಿದ್ದರೆ, ಪಿಎಫ್ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವರಗಳನ್ನು ಮನೆಯಿಂದಲೇ ಸರಿಪಡಿಸಬಹುದು.
ಮೊದಲನೆಯದಾಗಿ ನೀವು ಇಪಿಎಫ್ಒ https://unifiedportal-mem.epfindia.gov.in/memberinterface ನ ಪೋರ್ಟಲ್ಗೆ ಭೇಟಿ ನೀಡಬೇಕು.
ಯುಎಎನ್ ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ಇಲ್ಲಿ ನಮೂದಿಸುವ ಮೂಲಕ ನೀವು ಲಾಗಿನ್ ಆಗಬೇಕು. ಅದರ ಮುಂದಿನ ಹಂತದಲ್ಲಿ, ಮ್ಯಾನೇಜ್
ಟ್ಯಾಬ್ ಕ್ಲಿಕ್ ಮಾಡಿ. ಇದರ ನಂತರ, ಡ್ರಾಪ್ ಡೌನ್ ಮೆನುವಿನಲ್ಲಿ ಕೆವೈಸಿ ಆಯ್ಕೆ ಮಾಡಿ. ಬ್ಯಾಂಕ್ ಆಯ್ಕೆ ಮಾಡಿ ಮತ್ತು ಖಾತೆ ಸಂಖ್ಯೆ, ಹೆಸರು ಮತ್ತು ಐಎಫ್ಎಸ್ಸಿ ಕೋಡ್ ಭರ್ತಿ ಮಾಡಿ. ಇದರ ನಂತರ ಸೇವ್ ಕ್ಲಿಕ್ ಮಾಡಿ.
ಇದರ ನಂತರ ಸೆಕ್ಷನ್ ನಲ್ಲಿ ಮಾಹಿತಿ ಸಿಗಲಿದೆ. ನಂತರ ನಿಮ್ಮ ಹಣವು ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತದೆ. ಇಪಿಎಫ್ಒ, ಗ್ರಾಹಕರಿಗೆ ಅಗತ್ಯವಾದ ಸಲಹೆಯನ್ನು ಟ್ವೀಟ್ ಮಾಹಿತಿಯನ್ನು ಟ್ವೀಟ್ ಮಾಡಿದೆ.