
ಭವಿಷ್ಯ ನಿಧಿ ಖಾತೆ ಹೊಂದಿರುವ ಉದ್ಯೋಗಿಗಳಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಕ್ಲೇಮ್ ಗಳ ಇತ್ಯರ್ಥಕ್ಕೆ ಹೊಸ ವ್ಯವಸ್ಥೆಯನ್ನು ಮಾಡಲಾಗಿದೆ.
ಬಹು ಕೇಂದ್ರ ವ್ಯವಸ್ಥೆ ಇನ್ನು ಮುಂದೆ ಆನ್ಲೈನ್ ಮೂಲಕ ಲಭ್ಯವಾಗಲಿದ್ದು, ಇದರಿಂದಾಗಿ ಯಾವುದೇ ಕಚೇರಿಗಳಲ್ಲಿ ಸಲ್ಲಿಕೆಯಾಗುವ ಆನ್ಲೈನ್ ಕ್ಲೇಮ್ ಗಳನ್ನು ದೇಶದ ಇತರೆ ಭಾಗದಲ್ಲಿರುವ ಕಚೇರಿಗಳಲ್ಲೂ ಇತ್ಯರ್ಥ ಪಡಿಸಬಹುದಾಗಿದೆ.
ಕೊರೊನಾ ಸಾಂಕ್ರಮಿಕ ರೋಗದ ಕಾರಣ ಪಿಎಫ್ ಪ್ರಾದೇಶಿಕ ಕಚೇರಿಗಳ ಕಾರ್ಯ ಚಟುವಟಿಕೆಗಳಿಗೆ ಸಮಸ್ಯೆಯಾಗಿದ್ದು, ಈಗ ಕೈಗೊಂಡಿರುವ ಕ್ರಮದಿಂದಾಗಿ ಲಕ್ಷಾಂತರ ಪಿಎಫ್ ಗ್ರಾಹಕರಿಗೆ ಅನುಕೂಲವಾಗಲಿದೆ.