ಕೊರೊನಾ ವೈರಸ್ ಸೋಂಕಿನ ನಂತ್ರ ಕೇಂದ್ರ ಸರ್ಕಾರ ನೌಕರರ ಭವಿಷ್ಯ ನಿಧಿಯಿಂದ ಮುಂಗಡ ಹಣವನ್ನು ಹಿಂಪಡೆಯಲು ಉದ್ಯೋಗಿಗಳಿಗೆ ಅವಕಾಶ ನೀಡಿತ್ತು. ಹಣದ ಸಮಸ್ಯೆ ಎದುರಾಗದಿರಲಿ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಈ ಅವಕಾಶ ನೀಡಿತ್ತು. ಕೇಂದ್ರದ ಈ ನೆರವನ್ನು ಅನೇಕ ನೌಕರರು ಪಡೆದಿದ್ದಾರೆ.
ಮಾರ್ಚ್ ಕೊನೆಯ ವಾರದಿಂದ 38,71,664 ಜನರು ಇಪಿಎಫ್ ಒ ದಿಂದ 44,054.72 ಕೋಟಿ ರೂಪಾಯಿ ಪಡೆದಿದ್ದಾರೆ. ಕೋವಿಡ್ – 19 ಗೆ ಸಂಬಂಧಿಸಿದ ಕಾರಣ ನೀಡಿ ಕೆಲ ಕಾರ್ಮಿಕರು ಹಣ ವಿತ್ ಡ್ರಾ ಮಾಡಿದ್ದಾರೆ. ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಪ್ರಕಾರ, ಮಹಾರಾಷ್ಟ್ರ ಒಂದರಲ್ಲೇ 7,23,986 ಉದ್ಯೋಗಿಗಳು ಮಾರ್ಚ್ 25 ರಿಂದ ಆಗಸ್ಟ್ 31 ರವರೆಗೆ ಸುಮಾರು 8,968.45 ಕೋಟಿ ರೂಪಾಯಿ ಪಡೆದಿದ್ದಾರಂತೆ.
ಸೆಪ್ಟೆಂಬರ್ 1ರ ನಂತ್ರ ನಿಯಮ ಬದಲಾಗಿದೆ. ಕೇಂದ್ರ ಸರ್ಕಾರ ನೌಕರರ ಭವಿಷ್ಯ ನಿಧಿಯಿಂದ ಮುಂಗಡ ಹಣ ಪಡೆಯುವ ವಿನಾಯಿತಿ ಕೊನೆಗೊಳಿಸಿದೆ. ಆದ್ರೆ ಈಗ್ಲೂ ಪಿಎಫ್ ನಿಂದ ಹಣ ಪಡೆಯಬಹುದು. ಆದ್ರೆ ಇದು ಕೇಂದ್ರ ಸರ್ಕಾರದ ವಿನಾಯಿತಿಯಡಿ ಬರುವುದಿಲ್ಲ.
ನೌಕರರ ಭವಿಷ್ಯ ನಿಧಿಯಿಂದ ಹಣವನ್ನು ಹಿಂಪಡೆಯಲು, ಮೊದಲು ಇಪಿಎಫ್ಒ ಅಧಿಕೃತ ವೆಬ್ಸೈಟ್ಗೆ ಹೋಗಿ ಲಾಗಿನ್ ಆಗಬೇಕು. ಯುಎಎನ್ ಮತ್ತು ಪಾಸ್ವರ್ಡ್ ಸಹಾಯದಿಂದ ಲಾಗಿನ್ ಮಾಡಬಹುದು. ಪಿಎಫ್ ಖಾತೆಯನ್ನು ಆಧಾರ್ಗೆ ಲಿಂಕ್ ಮಾಡಿದ್ದಲ್ಲಿ ಮಾತ್ರ ಇದು ಸಾಧ್ಯ.
ಈ ಪೋರ್ಟಲ್ಗೆ ಲಾಗಿನ್ ಆದ ನಂತರ, ಆನ್ಲೈನ್ ಸೇವೆಯ ಮೇಲೆ ಕ್ಲಿಕ್ ಮಾಡಿ ಮತ್ತು ಫಾರ್ಮ್ – 31, 19 ಮತ್ತು 10 ಸಿ ಮೇಲೆ ಕ್ಲಿಕ್ ಮಾಡಿ.
ನಂತ್ರ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ, ಕ್ಲಿಕ್ ಮಾಡಿ. ಇದರ ನಂತರ ಮತ್ತೆ ಯಸ್ ಮೇಲೆ ಕ್ಲಿಕ್ ಮಾಡಿ. ಈಗ ಆನ್ಲೈನ್ ಕ್ಲೈಮ್ಗಾಗಿ ಮುಂದುವರಿಯಿರಿ.
ಆನ್ಲೈನ್ನಲ್ಲಿ ಹಣವನ್ನು ಹಿಂಪಡೆಯಲು, ಪಿಎಫ್ ಅಡ್ವಾನ್ಸ್ (ಫಾರ್ಮ್ 31) ಆಯ್ಕೆ ಮಾಡಿ. ಮೊತ್ತವನ್ನು ಏಕೆ ಹಿಂಪಡೆಯುತ್ತಿದ್ದೀರಿ ಎಂಬುದನ್ನು ಹೇಳಬೇಕು. ಕಾರಣಗಳನ್ನು ಭರ್ತಿ ಮಾಡಿದ ನಂತರ ನೌಕರರ ವಿಳಾಸವನ್ನು ಭರ್ತಿ ಮಾಡಿ.
ಹಣವನ್ನು ಹಿಂತೆಗೆದುಕೊಳ್ಳುವ ಕಾರಣಕ್ಕೆ ಸಂಬಂಧಿಸಿದ ದಾಖಲೆಗಳ ಸ್ಕ್ಯಾನ್ ನಕಲನ್ನು ಸಲ್ಲಿಸಬೇಕು. ಇಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು, ಉದ್ಯೋಗದಾತ / ಕಂಪನಿಯಿಂದಲೂ ಅನುಮೋದನೆ ಪಡೆಯಬೇಕು.
ಇದರ ನಂತರ, ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಈ ಕುರಿತು ಸಂದೇಶವನ್ನು ಕಳುಹಿಸಲಾಗುತ್ತದೆ. ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲು ನಿರ್ದಿಷ್ಟ ಸಮಯ ತೆಗೆದುಕೊಳ್ಳುತ್ತದೆ.