ಇಪಿಎಫ್ ತನ್ನ ಖಾತೆದಾರರಿಗೆ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಲಾಭವನ್ನು ಹಲವಾರು ಪಿಎಫ್ ಖಾತೆದಾರರು ಪಡೆದುಕೊಂಡಿದ್ದಾರೆ. ಇದೀಗ ಮೂರು ಮಹತ್ವದ ಯೋಜನೆಗಳ ಬಗ್ಗೆ ಖಾತೆದಾರರು ತಿಳಿಯಬಹುದಾಗಿದೆ.
ಹೌದು, ಪಿಎಫ್ ಖಾತೆದಾರ ಮರಣದ ನಂತರವೂ ಆತನ ಕುಟುಂಬಕ್ಕೆ ನೌಕರರ ಭವಿಷ್ಯ ನಿಧಿ ಸಂಘಟನೆ ಸಹಾಯ ನೀಡುತ್ತದೆ. ಇಪಿಎಫ್‌ಒನ ವಿಮಾ ಯೋಜನೆ 1976ರ ಅಡಿಯಲ್ಲಿ ಮಹತ್ವದ ಯೋಜನೆಯೊಂದಿದೆ. ನೌಕರ ಸಾವನ್ನಪ್ಪಿದರೆ ಆತನ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುತ್ತದೆ ನೌಕರರ ಭವಿಷ್ಯ ನಿಧಿ ಸಂಘಟನೆ. ಅಂದರೆ ನೌಕರನ ತಿಂಗಳ ಸಂಬಳದ 20 ಪಟ್ಟು ಹೆಚ್ಚು ಹಣವನ್ನು ಆ ವ್ಯಕ್ತಿಯ ಕುಟುಂಬಕ್ಕೆ ನೀಡಲಾಗುತ್ತದೆ.
ಇನ್ನು ಇಪಿಎಫ್‌ಒ ತನ್ನ ಖಾತೆದಾರರಿಗೆ ಪಿಂಚಣಿ ಯೋಜನೆ 1995 ಅಡಿಯಲ್ಲಿಯೂ ಖಾತೆದಾರ ಪಿಂಚಣಿ ಪಡೆಯಬಹುದು. ಆತನ ಸಾವಿನ ನಂತರವೂ ಈ ಸೌಲಭ್ಯ ಪಡೆಯಬಹುದಾಗಿದೆ. ನೌಕರನ ನಿವೃತ್ತಿ ಅಥವಾ ಮರಣದ ನಂತರವೂ ಆರ್ಥಿಕ ಸಹಾಯ ಇಪಿಎಫ್‌ಒನಿಂದ ಸಿಗಲಿದೆ. ನೌಕರನ ಪಿಎಫ್ ಖಾತೆಯಲ್ಲಿ ಠೇವಣಿ ಇರಿಸಿದ ಒಟ್ಟು ಮೊತ್ತದಲ್ಲಿ ತುರ್ತು ಕೆಲಸಗಳು ಅಥವಾ ನೌಕರನ ಮಕ್ಕಳ ಭವಿಷ್ಯದ ಕೆಲಸಗಳಿಗೆ ನೀಡಬಹುದಾಗಿದೆ.