ನಿಮ್ಮ ಎಟಿಎಂ ಕಾರ್ಡನ್ನು ನಿಮ್ಮ ಸ್ನೇಹಿತರು ಅಥವಾ ನಿಮ್ಮ ಸಂಗಾತಿಗೆ ನೀಡ್ತೀರಾ? ಹೀಗೆ ಮಾಡಿದ್ರೆ ಕೆಲವೊಂದು ನಷ್ಟ ಅನುಭವಿಸಬೇಕಾಗುತ್ತದೆ. ಪತ್ನಿ ಎಟಿಎಂ ನೀವು ಬಳಸಿದ್ರೂ ತೊಂದರೆ ತಪ್ಪಿದ್ದಲ್ಲ. ಅದು ಭದ್ರತಾ ನಿಯಮಗಳಿಗೆ ವಿರುದ್ಧವಾಗಿದೆ.
ನಷ್ಟ ತಪ್ಪಿಸಲು ಬಯಸಿದ್ರೆ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಎಚ್ಚರಿಕೆಯಿಂದ ಬಳಸಿ. ಎಟಿಎಂನ ಪಿನ್ ಯಾರೊಂದಿಗೂ ಹಂಚಿಕೊಳ್ಳಬೇಡಿ. ಕಾರ್ಡ್ ಮತ್ತು ಖಾತೆಯ ವಿವರಗಳನ್ನು ಯಾರಿಗೂ ಹೇಳಬೇಡಿ. ಎಟಿಎಂ ಕಾರ್ಡ್‌ಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ನಿಮ್ಮ ಪಿನ್ ಸಂಖ್ಯೆಯನ್ನು ಎಂದಿಗೂ ಕಾರ್ಡ್‌ನಲ್ಲಿ ಬರೆಯಬೇಡಿ. ಅಪರಿಚಿತರಿಂದ ಎಟಿಎಂ ವಹಿವಾಟಿನಲ್ಲಿ ಸಹಾಯ ಪಡೆಯಬೇಡಿ. ವ್ಯವಹಾರಕ್ಕಾಗಿ ಕಾರ್ಡ್ ನೀಡಬೇಡಿ. ಎಟಿಎಂ ಪಿನ್, ಬ್ಯಾಂಕ್ ನೌಕರರು ಮತ್ತು ಕುಟುಂಬ ಸದಸ್ಯರಿಗೂ ನೀಡಬೇಡಿ. ವಹಿವಾಟಿನ ಸಮಯದಲ್ಲಿ ಮೊಬೈಲ್ ಫೋನ್‌ನಲ್ಲಿ ಮಾತನಾಡಬೇಡಿ.
ಎಟಿಎಂ ವಹಿವಾಟಿನ ಸಮಯದಲ್ಲಿ ಸಂಪೂರ್ಣ ಗೌಪ್ಯತೆಯನ್ನು ಕಾಪಾಡಿಕೊಳ್ಳಿ. ಎಟಿಎಂ ಯಂತ್ರದಲ್ಲಿ ಪಿನ್ ಸಂಖ್ಯೆಯನ್ನು ನಮೂದಿಸುವಾಗ ಯಾರೂ ನೋಡುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ. ವಹಿವಾಟಿನ ನಂತ್ರ ತಕ್ಷಣ ಬರಬೇಡಿ. ಮಶಿನ್ ವೆಲ್ ಕಂ ಮೋಡ್ ಗೆ ಬರುವವರೆಗೆ ಕಾಯಿರಿ.
ಶಾಪಿಂಗ್ ಮಾಡಿದ ನಂತರ ವ್ಯಾಪಾರಿಗಳಿಂದ ನಿಮ್ಮ ಕಾರ್ಡ್ ಹಿಂಪಡೆಯಲು ಮರೆಯಬೇಡಿ. ಎಟಿಎಂನಲ್ಲಿ ಯಾವುದೇ ಹೆಚ್ಚುವರಿ ಸಾಧನವಿದ್ದರೆ ಅದರ ಬಗ್ಗೆ ಗಮನ ನೀಡಿ. ಎಟಿಎಂ ಕಾರ್ಡ್ ಕಳೆದುಹೋದರೆ ಅಥವಾ ಕದ್ದರೆ ತಕ್ಷಣ ಬ್ಯಾಂಕಿಗೆ ತಿಳಿಸಿ. ಬ್ಯಾಂಕಿನಿಂದ ಬರುವ ವಹಿವಾಟು ಎಚ್ಚರಿಕೆಗಳು ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ. ಯಾವುದೇ ವಹಿವಾಟು ನಡೆಸಿದ ಕೂಡಲೇ ಮೊಬೈಲ್‌ನಲ್ಲಿ ಎಸ್‌ಎಂಎಸ್ ಪರಿಶೀಲಿಸಿ.