alex Certify ಪತ್ನಿಗೆ ಈ ಗಿಫ್ಟ್ ನೀಡಿ ಪ್ರತಿ ತಿಂಗಳು ಗಳಿಸಿ ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಗೆ ಈ ಗಿಫ್ಟ್ ನೀಡಿ ಪ್ರತಿ ತಿಂಗಳು ಗಳಿಸಿ ಹಣ

ಕರ್ವಾ ಚೌತ್ ಸಂದರ್ಭದಲ್ಲಿ ಪತ್ನಿಗೆ ಉಡುಗೊರೆ ಕೊಡಲು ಬಯಸಿದ್ರೆ ಚಿನ್ನ, ದುಬಾರಿ ಬೆಲೆಯ ವಸ್ತು ಖರೀದಿಸುವ ಬದಲು ಈ ಬಾರಿ ಪತ್ನಿಗೆ ಪ್ರಯೋಜನವಾಗುವ ಉಡುಗೊರೆ ನೀಡಿ. ಹೆಂಡತಿ ಸಹ ಪ್ರತಿ ತಿಂಗಳು ನಿಯಮಿತ ಆದಾಯವನ್ನು ಗಳಿಸಬಹುದು. ಸರ್ಕಾರದ ಈ ಯೋಜನೆಯ ಹೆಸರು ರಾಷ್ಟ್ರೀಯ ಪಿಂಚಣಿ ಯೋಜನೆ.

ರಾಷ್ಟ್ರೀಯ ಪಿಂಚಣಿ ಯೋಜನೆ ಖಾತೆಯನ್ನು ಹೆಂಡತಿಯ ಹೆಸರಿನಲ್ಲಿ ತೆರೆಯಬಹುದು. ಎನ್‌ಪಿಎಸ್ ಯೋಜನೆಯಲ್ಲಿ ಹೆಂಡತಿಗೆ 60 ವರ್ಷ ತುಂಬಿದ ನಂತರ ಒಂದು ದೊಡ್ಡ ಮೊತ್ತ ಸಿಗುತ್ತದೆ. ಅವರು ಪ್ರತಿ ತಿಂಗಳು ಪಿಂಚಣಿಯಾಗಿ ನಿಯಮಿತ ಆದಾಯವನ್ನು ಸಹ ಪಡೆಯಬಹುದು. ಇದ್ರಿಂದ ಹೆಂಡತಿಗೆ 60 ವರ್ಷ ತುಂಬಿದ ನಂತ್ರ ಯಾರನ್ನೂ ಅವಲಂಬಿಸಬೇಕಾಗುವುದಿಲ್ಲ.

ಹೊಸ ಪಿಂಚಣಿ ವ್ಯವಸ್ಥೆ ಯೋಜನೆಯಲ್ಲಿ ಅನುಕೂಲಕ್ಕೆ ಅನುಗುಣವಾಗಿ ಪ್ರತಿ ತಿಂಗಳು ಅಥವಾ ವಾರ್ಷಿಕವಾಗಿ ಹಣವನ್ನು ಜಮಾ ಮಾಡಬಹುದು. 1,000 ರೂಪಾಯಿಗಳಿಂದ ಹೆಂಡತಿಯ ಹೆಸರಿನಲ್ಲಿ ಎನ್‌ಪಿಎಸ್ ಖಾತೆ ತೆರೆಯಬಹುದು. 60 ನೇ ವಯಸ್ಸಿನಲ್ಲಿ, ಎನ್‌ಪಿಎಸ್ ಖಾತೆ ಪ್ರಬುದ್ಧವಾಗುತ್ತದೆ. ನಿಮ್ಮ ವಯಸ್ಸು 65 ವರ್ಷವಾಗುವವರೆಗೂ ನೀವು ಬಯಸಿದ್ರೆ ಈ ಯೋಜನೆಯನ್ನು ಮುಂದುವರಿಸಬಹುದು.

18 ರಿಂದ 60 ವರ್ಷದೊಳಗಿನ ಯಾವುದೇ ಸಂಬಳ ಪಡೆಯುವ ವ್ಯಕ್ತಿ ಎನ್‌ಪಿಎಸ್‌ಗೆ ಸೇರಬಹುದು. ಎನ್‌ಪಿಎಸ್‌ನಲ್ಲಿ ಎರಡು ರೀತಿಯ ಖಾತೆಗಳಿವೆ: ಶ್ರೇಣಿ- I ಮತ್ತು ಶ್ರೇಣಿ- II. ಶ್ರೇಣಿ -1 ನಿವೃತ್ತಿ ಖಾತೆಯಾಗಿದ್ದು, ಪ್ರತಿಯೊಬ್ಬ ಸರ್ಕಾರಿ ನೌಕರನು ಈ ಖಾತೆ ತೆರೆಯುವುದು ಕಡ್ಡಾಯವಾಗಿದೆ. ಶ್ರೇಣಿ- II ಸ್ವಯಂಪ್ರೇರಿತ ಖಾತೆಯಾಗಿದೆ, ಇದರಲ್ಲಿ ಯಾವುದೇ ಸಂಬಳ ಪಡೆಯುವ ವ್ಯಕ್ತಿಯು ತನ್ನ ಪರವಾಗಿ ಹೂಡಿಕೆಯನ್ನು ಪ್ರಾರಂಭಿಸಬಹುದು ಮತ್ತು ಯಾವುದೇ ಸಮಯದಲ್ಲಿ ಹಣವನ್ನು ಹಿಂಪಡೆಯಬಹುದು.

25 ನೇ ವಯಸ್ಸಿನಲ್ಲಿ ಈ ಯೋಜನೆ ಸೇರಿದ್ದು, 60 ವರ್ಷದವರೆಗೆ, ಅಂದರೆ 35 ವರ್ಷಗಳವರೆಗೆ ಈ ಯೋಜನೆಯಡಿ ಪ್ರತಿ ತಿಂಗಳು 5000 ರೂಪಾಯಿಗಳನ್ನು ಠೇವಣಿ ಇಡಬೇಕಾಗುತ್ತದೆ. ನಿಮ್ಮ ಒಟ್ಟು ಹೂಡಿಕೆ 21 ಲಕ್ಷ ರೂಪಾಯಿಗಳಾಗುತ್ತದೆ. 60 ವರ್ಷದ ನಂತರ ಪ್ರತಿ ತಿಂಗಳು 61 ಸಾವಿರ ರೂಪಾಯಿಗಳನ್ನು ಪಿಂಚಣಿಯಾಗಿ ಪಡೆಯುತ್ತೀರಿ. ಅಲ್ಲದೆ 25 ಲಕ್ಷ ರೂಪಾಯಿ ಫಂಡ್ ಸಿಗುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...