ವಾಟ್ಸಾಪ್ ಬಳಕೆದಾರರೇ ಇತ್ತ ಗಮನಿಸಿ. ನೀವು ಉಪಯೋಗಿಸುತ್ತಿರುವ ನಿಮ್ಮ ವಾಟ್ಸಾಪ್ ಸಂಖ್ಯೆ ಎಷ್ಟು ಸೇಫ್ ಅಂತ ನಿಮಗೆ ಗೊತ್ತಾ….? ಇತ್ತೀಚಿನ ವರದಿ ಪ್ರಕಾರ ಎಷ್ಟೋ ವಾಟ್ಸಾಪ್ ಸಂಖ್ಯೆಗಳು ಅಪಾಯದಲ್ಲಿವೆಯಂತೆ. ಬಳಕೆದಾರರ ಮೊಬೈಲ್ ಸಂಖ್ಯೆಯನ್ನು ಸಲೀಸಾಗಿ ಗೂಗಲ್ ನಲ್ಲಿ ಹುಡುಕ ಬಹುದಾಗಿದೆಯಂತೆ. ಅಷ್ಟೆ ಅಲ್ಲ ಹ್ಯಾಕರ್‌ಗಳು ನಂಬರ್ ಜೊತೆಗೆ ಅನೇಕ ಮಾಹಿತಿಯನ್ನು ತಿಳಿಯಬಹುದಾಗಿದೆ ಎಂದು ಹೇಳಲಾಗುತ್ತಿದೆ.
ಹೌದು, ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ನಲ್ಲಿ ದೋಷ ಪತ್ತೆಯಾಗಿದೆ. ಇನ್ನು ಈ ದೋಷವು ವಾಟ್ಸಾಪ್ ನ ಕ್ಲಿಕ್ ಟು ಚಾಟ್ ವೈಶಿಷ್ಟ್ಯದಲ್ಲಿ ಕಂಡುಬಂದಿದೆ ಎಂದು ಅತುಲ್ ಜಯರಾಮ್ ಎಂಬವರು ಹೇಳಿದ್ದಾರೆ. ಇವರೇ ವಾಟ್ಸಾಪ್ ನ ಈ ದೋಷವನ್ನು ಕಂಡುಹಿಡಿದವರು. ಇದರ ಜೊತೆಗೆ ಅವರು ಹೇಳುವ ಪ್ರಕಾರ ವಾಟ್ಸಾಪ್ ಸಂಖ್ಯೆಯ ಹುಡುಕಾಟದಿಂದ ಬಳಕೆದಾರನ ಒಂದಿಷ್ಟು ಗೌಪ್ಯತೆಗಳನ್ನು ತಿಳಿಯಬಹುದಂತೆ.
ಗೂಗಲ್‌ನಲ್ಲಿ ಸೂಚ್ಯಂಕವಾಗಿರುವ ಸುಮಾರು 3 ಲಕ್ಷ ಸಂಖ್ಯೆಗಳನ್ನು ಅತುಲ್ ಜಯರಾಮ್ ಕಂಡು ಹಿಡಿದಿದ್ದಾರಂತೆ. ಇನ್ನು ಹ್ಯಾಕರ್ ಗಳು ನಂಬರ್ ತೆಗೆದುಕೊಂಡು ಏನು ಬೇಕಾದರೂ ಮಾಡಬಹುದು ಎಂದು ಹೇಳಿದ್ದಾರೆ.