ಕೇಂದ್ರ ಸರ್ಕಾರ ಪ್ರಧಾನ್ ಮಂತ್ರಿ ಸಮ್ಮಾನ್ ನಿಧಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡುವ ತಯಾರಿ ನಡೆಸಿದೆ. ಏಳನೇ ಕಂತಿನ ಹಣ ವರ್ಗಾವಣೆ ಡಿಸೆಂಬರ್ 1ರಿಂದ ಶುರುವಾಗಲಿದೆ. ಅಂದ್ರೆ 25 ದಿನಗಳ ನಂತ್ರ ಫಲಾನುಭವಿಗಳ ಖಾತೆಗೆ 2000 ಬರಲಿದೆ.
ಈ ಯೋಜನೆಯಡಿ ವಾರ್ಷಿಕವಾಗಿ 6000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಈವರೆಗೆ 6 ಕಂತುಗಳನ್ನು ರೈತರಿಗೆ ಕಳುಹಿಸಲಾಗಿದೆ. ಕಳೆದ 23 ತಿಂಗಳಲ್ಲಿ 11.17 ಕೋಟಿ ರೈತರಿಗೆ ಕೇಂದ್ರ ಸರ್ಕಾರ ನೇರವಾಗಿ 95 ಕೋಟಿ ರೂಪಾಯಿ ನೀಡಿದೆ.
ಮೊದಲ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31 ರ ನಡುವೆ ಬರುತ್ತದೆ. ಎರಡನೇ ಕಂತು ಏಪ್ರಿಲ್ 1 ರಿಂದ ಜುಲೈ 31 ರವರೆಗೆ ಮತ್ತು ಮೂರನೇ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರ ನಡುವೆ ಬರುತ್ತದೆ. ದಾಖಲೆಗಳು ಸರಿಯಾಗಿದ್ದರೆ, ಎಲ್ಲಾ 11.17 ಕೋಟಿ ನೋಂದಾಯಿತ ರೈತರಿಗೂ ಏಳನೇ ಕಂತಿನ ಲಾಭ ಸಿಗಲಿದೆ. ಫಲಾನುಭವಿಗಳು ದಾಖಲೆಯನ್ನು ಪರಿಶೀಲಿಸಬೇಕಾದ ಅಗತ್ಯತೆಯಿದೆ.
ಅರ್ಜಿ ಸಲ್ಲಿಸಿದ 1.3 ಕೋಟಿ ರೈತರಿಗೆ ಹಣ ಬಂದಿಲ್ಲ. ತಪ್ಪು ದಾಖಲಾತಿ ಹಾಗೂ ಆಧಾರ್ ಕಾರ್ಡ್ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಲಾಗಿನ್ ಮಾಡಬೇಕು.ಅಲ್ಲಿ ಫಾರ್ಮರ್ಸ್ ಕಾರ್ನರ್ ಟ್ಯಾಬ್ ಕ್ಲಿಕ್ ಮಾಡಬೇಕು. ಈಗಾಗಲೇ ಅರ್ಜಿ ಸಲ್ಲಿಸಿದ್ದು, ಆಧಾರ್ ಸರಿಯಾಗಿ ಅಪ್‌ಲೋಡ್ ಮಾಡದಿದ್ದರೆ ಅಥವಾ ಕೆಲವು ಕಾರಣಗಳಿಂದಾಗಿ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ ಅಲ್ಲಿ ಮಾಹಿತಿ ಸಿಗುತ್ತದೆ. ಇಲ್ಲಿಯೇ ನೀವು ಯೋಜನೆಗೆ ಹೆಸರು ನೋಂದಾಯಿಸಬಹುದು.