ಜಗತ್ತಿನಲ್ಲಿ ಹಳೆಯ ವಿಷಯಗಳ ಬಗ್ಗೆ ಒಲವು ಹೊಂದಿರುವ ಅನೇಕ ಜನರಿದ್ದಾರೆ. ಅವರು ಪುರಾತನ ವಸ್ತುಗಳನ್ನು ಸಂಗ್ರಹಿಸುತ್ತಾರೆ. ಅನೇಕ ಬಾರಿ ಈ ಪುರಾತನ ವಸ್ತುಗಳನ್ನು ಹರಾಜು ಮಾಡಲಾಗುತ್ತದೆ. ನಮ್ಮಲ್ಲಿರುವ ಹಳೆ ವಸ್ತುಗಳಿಗೆ ಇಷ್ಟೊಂದು ಬೆಲೆ ಇದೆ ಎಂಬುದು ನಮಗೆ ಗೊತ್ತೇ ಇರುವುದಿಲ್ಲ.
ಭಾರತದಲ್ಲಿ ಮೊದಲು ಚಿನ್ನ ಹಾಗೂ ಬೆಳ್ಳಿ ನಾಣ್ಯಗಳ ಚಲಾವಣೆಯಿತ್ತು. ಈಗ ಸಾಮಾನ್ಯ ನಾಣ್ಯಗಳನ್ನು ಚಲಾಯಿಸಲಾಗುತ್ತದೆ. ಆದ್ರೆ ಈ ನಾಣ್ಯಗಳು ಕೂಡ ನಮ್ಮ ಅದೃಷ್ಟ ಬದಲಿಸಬಲ್ಲವು. ಕೆಲ ಹಳೆ ನಾಣ್ಯಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು. ನಿಮ್ಮ ಬಳಿ 1913ರ ನಾಣ್ಯವಿದ್ರೆ ನೀವಿದನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಬಹುದು.
ನಿಮ್ಮ ಬಳಿ 1913ರ ನಾಣ್ಯವೇ ಇರಬೇಕೆಂದೇನಿಲ್ಲ. ತುಂಬಾ ಹಳೆಯ ನಾಣ್ಯಗಳು, ವಿಶೇಷ ನಾಣ್ಯಗಳನ್ನು ನೀವು ಮಾರಾಟ ಮಾಡಬಹುದು. ಈ ನಾಣ್ಯಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡಬಹುದು. ಇಂಡಿಯಾ ಮಾರ್ಟ್, ಇಬೇ ವೆಬ್ಸೈಟ್ ಗಳಲ್ಲಿ ಈ ನಾಣ್ಯಗಳ ಖರೀದಿ ನಡೆಯುತ್ತದೆ.
ಇಂಡಿಯಾ ಮಾರ್ಟ್ ಗೆ ಹೋಗಿ ಮೊದಲು ಅಕೌಂಟ್ ಓಪನ್ ಮಾಡಿ. ಅಕೌಂಟ್ ಓಪನ್ ಆದ್ಮೇಲೆ ನೀವು ನಾಣ್ಯ ಮಾರಾಟ ಶುರು ಮಾಡಬಹುದು. ಅನೇಕರು ಇಲ್ಲಿ ನಾಣ್ಯಗಳ ಮಾರಾಟ ಮಾಡ್ತಿದ್ದಾರೆ. ಹಳೆ ನಾಣ್ಯಗಳ ಸಂಗ್ರಹದಲ್ಲಿ ನಿಮಗೆ ಆಸಕ್ತಿಯಿದ್ದರೆ ನೀವು ಹಣ ಕೊಟ್ಟು ಅದನ್ನು ಖರೀದಿ ಮಾಡಬಹುದು.