ಕೇಂದ್ರ ಸರ್ಕಾರದ ಸೂಚನೆಯನ್ವಯ ಆಧಾರ್ ಕಾರ್ಡ್ನೊಂದಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಬೇಕು. ಇಲ್ಲದೇ ಹೋದರೆ ದಂಡ ವಿಧೀಸುತ್ತೇವೆ ಎಂದು ಹೇಳಲಾಗಿತ್ತು. ಕೊರೊನಾದಿಂದಾಗಿ ಈ ಪ್ರಕ್ರಿಯೆಯ ಗಡುವನ್ನು ವಿಸ್ತರಣೆ ಕೂಡ ಮಾಡಲಾಗಿತ್ತು.
ಅನೇಕ ಜನ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಕೂಡ ಮಾಡಿದ್ದರು. ಇದೀಗ ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಆಗಿದೆಯಾ ಇಲ್ವಾ ಎಂಬುದನ್ನು ತಿಳಿಯೋದಿಕ್ಕೆ ಸರಳ ವಿಧಾನ ಇಲ್ಲಿದೆ. ಸರ್ಕಾರ ನೀಡಿದ್ದ ಗಡುವು ಇನ್ನೇನು ಮುಗಿಯುವ ಹಂತದಲ್ಲಿರೋದ್ರಿಂದ ಈ ಕೆಲಸ ಮುಖ್ಯವಾಗಿದೆ.
ನೀವು ಈ ಪ್ರಕ್ರಿಯೆ ಮುಗಿಸಿದ್ದರೆ, ಅದರ ಸ್ಥಿತಿಗತಿ ತಿಳಿಯಲು ಆನ್ಲೈನ್ ಮೊರೆ ಹೋಗಬಹುದು. ಮೊದಲು ಆದಾಯ ತೆರಿಗೆ ವೆಬ್ಸೈಟ್ಗೆ ಹೋಗಿ ಅಲ್ಲಿ ಆಧಾರ್ ಲಿಂಕ್ ಆಪ್ಷನ್ ಆಯ್ಕೆ ಮಾಡಿಕೊಳ್ಳಿ. ನಂತರ ಲಿಂಕ್ ಪ್ರಕ್ರಿಯೆ ಮುಗಿದಿದ್ದರೆ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ. ಆಗ ಆ ಕಾರ್ಡ್ ಲಿಂಕ್ ಆಗಿದೆಯೋ ಇಲ್ವೋ ಎಂಬ ಮಾಹಿತಿ ಗೊತ್ತಾಗುತ್ತದೆ. ಮತ್ತೊಂದು ಆಯ್ಕೆ ಇದೆ. ನೀವು ಈ ಫಿಲ್ಲಿಂಗ್ ವೆಬ್ಸೈಟ್ಗೆ ಹೋಗಿ ನಿಮ್ಮ ಪ್ಯಾನ್ ಹಾಗೂ ಆಧಾರ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿದ ನಂತರ ಲಿಂಕ್ ಆಗಿದ್ದರ ಬಗ್ಗೆ ಮಾಹಿತಿ ನೀಡಲಾಗುತ್ತದೆ.