ವರ್ಚುವಲ್ ಚಿನ್ನ ಖರೀದಿಯ ಯೋಜನೆಯನ್ನು ಕೇಂದ್ರ ಸರ್ಕಾರ 2015 ರಲ್ಲಿ ಆರಂಭಿಸಿದ್ದು, ಭೌತಿಕ ಚಿನ್ನದ ಬದಲಾಗಿ ಅಷ್ಟೇ ಮೌಲ್ಯದ ಹಣಕಾಸು ಉಳಿತಾಯ ಮಾಡುವುದು ಯೋಜನೆಯ ಉದ್ದೇಶವಾಗಿದೆ.
ಇದೀಗ 2020 – 21 ನೇ ಸಾಲಿನ ಏಳನೇ ಹಂತದ ಚಿನ್ನದ ಬಾಂಡ್ ಮಾರಾಟ ಯೋಜನೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರದಿಂದ ಆರಂಭಿಸಲಿದ್ದು, ಅಕ್ಟೋಬರ್ 16 ರವರೆಗೆ ಖರೀದಿಸಲು ಅವಕಾಶ ನೀಡಲಾಗಿದೆ.
ಪ್ರತಿ ಗ್ರಾಂ ಚಿನ್ನಕ್ಕೆ 5,051 ರೂಪಾಯಿ ನಿಗದಿ ಮಾಡಲಾಗಿದ್ದು, ಆನ್ಲೈನ್ ಮೂಲಕ ಖರೀದಿಸುವವರಿಗೆ 50 ರೂಪಾಯಿ ರಿಯಾಯಿತಿ ಸಿಗಲಿದೆ. ಹೀಗಾಗಿ ಆನ್ಲೈನ್ ಮೂಲಕ ಖರೀದಿಸಿದರೆ ಪ್ರತಿ ಗ್ರಾಂ ಚಿನ್ನದ ಬೆಲೆ 5,001 ರೂಪಾಯಿಗಳಾಗಲಿದೆ.
ವ್ಯಕ್ತಿಯೊಬ್ಬರ ಕನಿಷ್ಟ ಹೂಡಿಕೆ 1 ಗ್ರಾಂ ಹಾಗೂ ಗರಿಷ್ಟ ಹೂಡಿಕೆ 500 ಗ್ರಾಂ ಇದ್ದು, ಹಿಂದೂ ಅವಿಭಕ್ತ ಕುಟುಂಬದ ಖರೀದಿ ಮಿತಿ 4 ಕೆ.ಜಿ. ನಿಗದಿಪಡಿಸಲಾಗಿದೆ.