ಹಣಕಾಸು ವರ್ಷ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ. ಏಪ್ರಿಲ್ ನಿಂದ ಹೊಸ ಹಣಕಾಸು ವರ್ಷ ಆರಂಭವಾಗಲಿದ್ದು, ಆ ಸಂದರ್ಭದಲ್ಲಿ ಬ್ಯಾಂಕುಗಳಿಂದ ಸಾಲ ಪಡೆದು ದ್ವಿಚಕ್ರ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ.
ದ್ವಿಚಕ್ರ ವಾಹನಗಳಿಗೆ ಬಳಕೆಯಾಗುವ ಲೋಹದ ಬೆಲೆಯಲ್ಲಿ ಹೆಚ್ಚಳವಾಗಿರುವ ಕಾರಣ ಏಪ್ರಿಲ್ ತಿಂಗಳಿನಿಂದ ಬೈಕುಗಳ ಬೆಲೆ ಏರಿಕೆ ಮಾಡಲು ದ್ವಿಚಕ್ರವಾಹನ ಉತ್ಪಾದಕ ಸಂಸ್ಥೆಗಳು ಮುಂದಾಗಿವೆ. ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗಿರುವುದೂ ಸಹ ಬೆಲೆ ಹೆಚ್ಚಳಕ್ಕೆ ಮತ್ತೊಂದು ಕಾರಣ.
ಕೊರೋನಾ ತಡೆಗೆ ಕಠಿಣ ನಿಯಮ ಜಾರಿ, 100 ರೂ.ನಿಂದ 10 ಸಾವಿರ ರೂ.ವರೆಗೆ ದಂಡ
ಕಾರುಗಳ ಬೆಲೆಯಲ್ಲೂ ಏರಿಕೆಯಾಗಲಿದೆ ಎನ್ನಲಾಗಿದ್ದು, ಮಾರುತಿ ಸುಜುಕಿ ಈಗಾಗಲೇ ತನ್ನ ಉತ್ಪನ್ನಗಳ ಬೆಲೆ ಏಪ್ರಿಲ್ ತಿಂಗಳಿನಿಂದ ಏರಿಕೆಯಾಗಲಿದೆ ಎಂಬ ಮುನ್ಸೂಚನೆಯನ್ನು ನೀಡಿದೆ.