ನವದೆಹಲಿ: ದೇಶದ 40 ಕೋಟಿ ಜನರಿಗೆ ಹೊಸ ವೈದ್ಯಕೀಯ ವಿಮೆ ಸೌಲಭ್ಯ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(PMJAY) ವೈದ್ಯಕೀಯ ಸೌಲಭ್ಯವನ್ನು ಪಡೆಯದ, ಈ ಯೋಜನೆಗೆ ನಿಗದಿಪಡಿಸಲಾದ ಮಾನದಂಡಗಳ ಪ್ರಕಾರ ವಿಮೆ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಾಗದ ಸುಮಾರು 40 ಕೋಟಿ ಜನರಿಗಾಗಿ ಹೊಸ ವೈದ್ಯಕೀಯ ವಿಮೆ ಸೌಲಭ್ಯ ಕಲ್ಪಿಸಲಾಗುತ್ತದೆ.
ಜಾರಿಗೆ ಬರಲಿರುವ ಹೊಸ ವಿಮೆ ಸೌಲಭ್ಯವು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಮಾದರಿಯಲ್ಲಿಯೇ ಇರಲಿದೆ. ಕೇಂದ್ರ ಸರ್ಕಾರ ಯೋಜನೆಗಾಗಿ 21 ವಿಮಾ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡಿದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ವೈದ್ಯಕೀಯ ವಿಮೆ ಪಡೆಯದ ಮತ್ತು ಯೋಜನೆಯ ಮಾನದಂಡಗಳ ಪ್ರಕಾರ ವಿಮೆ ಸೌಲಭ್ಯ ಪಡೆಯಲು ಸಾಧ್ಯವಾಗದ 40 ಕೋಟಿ ಜನರಿಗಾಗಿ ಹೊಸ ವೈದ್ಯಕೀಯ ವಿಮೆ ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಲಾಗಿದೆ.