
ಹಬ್ಬಗಳು ಬಂತಂದ್ರೆ ಸಾಕು ಗ್ರಾಹಕರಿಗೆ ಖುಷಿಯೋ ಖುಷಿ. ಏಕೆಂದರೆ ಆನ್‌ಲೈನ್ ಮಾರಾಟ ಮಳಿಗೆಗಳು ಹೆಚ್ಚಿನ ಆಫರ್‌ಗಳನ್ನು ನೀಡುತ್ತಾರೆ ಅಂತಾ. ಅದೇ ರೀತಿ ಇದೀಗ ಸ್ನಾಪ್ ಡೀಲ್ ಸೇರಿದಂತೆ ಅನೇಕ ಆನ್‌ಲೈನ್ ಮಳಿಗೆಗಳು ದೀಪಾವಳಿಗೆ ಭಾರಿ ಆಫರ್‌ಗಳನ್ನು ನೀಡಿದೆ.
ಹೌದು, ದೀಪಾವಳಿ ಹಬ್ಬ ಇನ್ನೇನು ಸನಿಹದಲ್ಲೇ ಇದೆ. ಹೀಗಿರುವಾಗ ತನ್ನ ಗ್ರಾಹಕರಿಗೆ ಫ್ಲಿಪ್‌ಕಾಟ್, ಸ್ನಾಪ್‌ಡೀಲ್, ರಿಯಲ್‌ಮಿ ಹಬ್ಬದ ಅಂಗವಾಗಿ ಅನೇಕ ಆಫರ್‌ಗಳನ್ನು ನೀಡಿದೆ. ಅಕ್ಟೋಬರ್ 16 ರಿಂದ ಸ್ನಾಪ್‌ಡೀಲ್ ದಿವಾಲಿ ಸೇಲ್ ಆರಂಭವಾಗಲಿದ್ದು, ಅಕ್ಟೋಬರ್ 20 ರವರೆಗೆ ನಡೆಯಲಿದೆ.
ಇನ್ನು ಅಮೆಜಾನ್ ಅಕ್ಟೋಬರ್ 17ರಂದು ಗ್ರೇಟ್ ಇಂಡಿಯನ್ ಸೇಲ್ ಆಯೋಜನೆ ಮಾಡಿದೆ. ಈ ದೀಪಾವಳಿ ಸೇಲ್‌ನಲ್ಲಿ ಮನೆಗೆ ಬೇಕಾದ ವಸ್ತುಗಳು, ಬಟ್ಟೆ, ಎಲೆಕ್ಟ್ರಿಕ್ ವಸ್ತುಗಳು ಹೀಗೆ ಎಲ್ಲದರ ಮೇಲೂ ಆಫರ್ ಇದೆ. ನಿಮಗೆ ಬೇಕಾದ ವಸ್ತುಗಳು ದುಬಾರಿ ಎಂದುಕೊಂಡು ಕೊಳ್ಳದೆ ಬಿಟ್ಟಿದ್ದರೆ ಅಂತಹ ವಸ್ತುಗಳನ್ನು ಆಫರ್ ಮೇಲೆ ನೀವು ಕೊಳ್ಳಬಹುದು.