ಕೊರೊನಾ ಅನೇಕರ ಬದುಕು ಬದಲಿಸಿದೆ. ಕೆಲವರು ಕೆಲಸ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅನೇಕರು ಸ್ವಂತ ವ್ಯಾಪಾರ ಶುರು ಮಾಡುವ ಆಲೋಚನೆ ಮಾಡ್ತಿರುತ್ತಾರೆ.
ಸ್ವಂತ ಉದ್ಯೋಗದ ಪ್ಲಾನ್ ನಲ್ಲಿದ್ದರೆ ಆನ್ಲೈನ್ ಆಹಾರ ವಿತರಣೆ ಬ್ಯುಸಿನೆಸ್ ಶುರು ಮಾಡಬಹುದು.
ಇದ್ರಲ್ಲಿ ಗಳಿಕೆ ಜೊತೆ ವ್ಯವಹಾರ ಬೆಳವಣಿಗೆಗೆ ಉತ್ತಮ ಅವಕಾಶವಿದೆ. ಮೊದಲು ನೀವು ಸಸ್ಯಹಾರ ಅಥವಾ ಮಾಂಸ ಆಹಾರದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತ್ರ ಫಾಸ್ಟ್ ಫುಡ್ ಅಥವಾ ಯಾವ ಆಹಾರವನ್ನು ನೀವು ತಯಾರಿಸಿ ಮಾರಾಟ ಮಾಡುತ್ತೀರಿ ಎಂಬುದನ್ನು ನಿರ್ಧರಿಸಬೇಕು. ಆನ್ಲೈನ್ ಆಹಾರ ವಿತರಣೆ ಶುರು ಮಾಡುವ ಮೊದಲು ಆಹಾರದ ಪಟ್ಟಿ ತಯಾರಿಸಿಕೊಳ್ಳಬೇಕು. ಆನ್ಲೈನ್ ನಲ್ಲಿ ಆಹಾರ ವಿತರಣೆ ಮಾಡುವ ಕಂಪನಿಗಳ ಜೊತೆ ನೀವು ಒಪ್ಪಂದ ಮಾಡಿಕೊಂಡು ವ್ಯವಹಾರ ಶುರು ಮಾಡಬಹುದು. ಇದಕ್ಕೆ ಕಡಿಮೆ ಬಂಡವಾಳ ಸಾಕಾಗುತ್ತದೆ. ಹಾಗೆ ನೀವು ಸೀಮಿತ ಆಹಾರವನ್ನು ಮಾರಾಟ ಮಾಡಬಹುದು. ಫೇಸ್ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿ, ಅವರಿಂದ ಆರ್ಡರ್ ಪಡೆದು ಕೂಡ ನೀವು ಆನ್ಲೈನ್ ಆಹಾರ ಸರಬರಾಜು ವ್ಯವಹಾರ ಶುರು ಮಾಡಬಹುದು.
ಆನ್ಲೈನ್ ಬೇಡವೆಂದ್ರೆ ನೀವು ರೆಸ್ಟೋರೆಂಟ್ ಕೂಡ ತೆರೆಯಬಹುದು. ಇದಕ್ಕೆ 7-12 ಲಕ್ಷ ರೂಪಾಯಿ ಬೇಕಾಗುತ್ತದೆ. ಬಾಡಿಗೆಗೆ ಜಾಗ ಪಡೆದು ಇದನ್ನು ಶುರು ಮಾಡಬಹುದು. ಅದಕ್ಕೆ 700 ರಿಂದ 1500 ಚದರ ಅಡಿ ಜಾಗ ಬೇಕಾಗುತ್ತದೆ. ಆಹಾರ ಇಲಾಖೆಯಿಂದ ಆಹಾರ ಸುರಕ್ಷತಾ ಪ್ರಮಾಣ ಪತ್ರವನ್ನು ನೀಡಬೇಕು. ಆರೋಗ್ಯ ಇಲಾಖೆ ಹಾಗೂ ಕಾರ್ಪೋರೇಷನ್ ಒಪ್ಪಿಗೆ ಸಿಕ್ಕ ನಂತ್ರ ನೀವು ರೆಸ್ಟೋರೆಂಟ್ ಶುರು ಮಾಡಬಹುದು. ಆರಂಭದಲ್ಲಿ ಕಡಿಮೆ ಸಿಬ್ಬಂದಿಯನ್ನು ಇಟ್ಟುಕೊಳ್ಳಬೇಕು. ಆರಂಭದಲ್ಲಿ ನಿಮಗೆ ಲಾಭ ಸಿಗುವುದಿಲ್ಲ. ಇದಕ್ಕೆ ಆರ್ಥಿಕ ಹಾಗೂ ಮಾನಸಿಕವಾಗಿ ಸಿದ್ಧರಿರಬೇಕಾಗುತ್ತದೆ. ನಿಮ್ಮ ಸೇವೆ ಉತ್ತಮವಾಗಿದ್ದರೆ ನಂತ್ರದ ದಿನಗಳಲ್ಲಿ ನೀವು ಲಾಭ ಗಳಿಸಬಹುದು.