ಭಾರತೀಯ ಮಾರುಕಟ್ಟೆಯಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಸೋಮವಾರ ಎಂಸಿಎಕ್ಸ್ ನಲ್ಲಿನ ಚಿನ್ನದ ಭವಿಷ್ಯವು ಶೇಕಡಾ 0.9 ರಷ್ಟು ಕುಸಿದು 10 ಗ್ರಾಂಗೆ 50,130 ರೂಪಾಯಿಯಾಗಿದೆ. ಬೆಳ್ಳಿ ಭವಿಷ್ಯವು ಶೇಕಡಾ 0.88 ರಷ್ಟು ಇಳಿದು ಪ್ರತಿ ಕೆ.ಜಿ.ಗೆ 60,605 ರೂಪಾಯಿಯಾಗಿದೆ. ಶುಕ್ರವಾರ ಚಿನ್ನವು ಶೇಕಡಾ 0.4 ರಷ್ಟು ಹೆಚ್ಚಳ ಕಂಡಿತ್ತು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆದಾರರ ದೃಷ್ಟಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿದೆ. ಸೋಮವಾರ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ 1,900 ಡಾಲರ್ ಪ್ರತಿ ಔನ್ಸ್ ಆಗಿದೆ. ಕೆಲ ದಿನಗಳಿಂದ ಡಾಲರ್ ಮೌಲ್ಯದಲ್ಲಿ ಹೆಚ್ಚಳವಾಗಿತ್ತು. ಆದ್ರೆ ಸೋಮವಾರ ಡಾಲರ್ ಮೌಲ್ಯದಲ್ಲಿ ಇಳಿಕೆ ಕಂಡಿದ್ದು, ಹೂಡಿಕೆದಾರರಿಗೆ ಬಂಗಾರ ಖರೀದಿ ಸುಲಭವಾಗಿದೆ.
ಚಿನ್ನದ ಬೆಲೆ ಇಳಿಯುತ್ತಿದೆ ಅಂದ್ರೆ ಮೊದಲಿನ ದರಕ್ಕೆ ಬರುತ್ತೆ ಎಂದಲ್ಲ. ಷೇರು ಮಾರುಕಟ್ಟೆ ದೃಷ್ಟಿಯಲ್ಲಿ ನೋಡಿ ತಪ್ಪು ಮಾಡಬೇಡಿ ಎಂದು ತಜ್ಞರು ಹೇಳಿದ್ದಾರೆ. ದೀಪಾವಳಿ ಸಂದರ್ಭದಲ್ಲೂ ಚಿನ್ನದ ಬೆಲೆಯಲ್ಲಿ ಹೆಚ್ಚು ಏರಿಕೆ ಅಥವಾ ಇಳಿಕೆ ಕಂಡು ಬರುವುದಿಲ್ಲ. ಚಿನ್ನದ ಬೆಲೆ 50ರಿಂದ 52 ಸಾವಿರ ರೂಪಾಯಿಯಲ್ಲಿ ವ್ಯವಹಾರ ನಡೆಸಲಿದೆ. ಬೆಳ್ಳಿ ಬೆಲೆಯಲ್ಲಿ ಕೂಡ ಹೆಚ್ಚಿನ ಬದಲಾವಣೆಯಾಗುವುದಿಲ್ಲವೆಂದು ತಜ್ಞರು ಹೇಳಿದ್ದಾರೆ.