
ಐಟಿ ದಿಗ್ಗಜ ಸಂಸ್ಥೆಗಳ ಪೈಕಿ ಒಂದಾಗಿರುವ ವಿಪ್ರೋದ ನೂತನ ಸಿಇಒ ಆಗಿ ನೇಮಕಗೊಂಡಿರುವ ಥಿಯರ್ರಿ ಡೇಲಾಪೋರ್ಟ್ ಅವರ ವಾರ್ಷಿಕ ವೇತನ ದಂಗಾಗಿಸುವಂತಿದೆ.
ಬರೋಬ್ಬರಿ 62 ಕೋಟಿ ರೂಪಾಯಿಗಳನ್ನು ಅವರು ವೇತನವಾಗಿ ಪಡೆಯಲಿದ್ದು, ಇದರ ಜೊತೆಗೆ ಷೇರು ಆದಾಯವೂ ಲಭಿಸಲಿದೆ.
ಐಟಿ ವಲಯದಲ್ಲಿ ಅತಿ ಹೆಚ್ಚು ವೇತನ ಪಡೆಯುವ ಸಿಇಒ ಎಂಬ ಹೆಗ್ಗಳಿಕೆಗೆ ಥಿಯರ್ರಿ ಡೇಲಾಪೋರ್ಟ್ ಪಾತ್ರರಾಗಿದ್ದು, ಜುಲೈ 6 ರಿಂದ ಅವರ ಆಡಳಿತಾವಧಿ ಆರಂಭವಾಗಲಿದೆ.