![](https://kannadadunia.com/wp-content/uploads/2020/05/one-day-chennai-to-tirupati-balaji-sightseeing-tour-package-tirumala-venkateswara-temple.jpg)
18 ಕೋಟಿ ರೂಪಾಯಿ ಮೌಲ್ಯದ 1000 ರೂ. ಮುಖಬೆಲೆಯ 1.8 ಲಕ್ಷ ನೋಟುಗಳು ಹಾಗೂ 31.7 ಕೋಟಿ ರೂಪಾಯಿ ಮೌಲ್ಯದ 500 ರೂ. ಮುಖಬೆಲೆಯ 6.34 ಲಕ್ಷ ನೋಟುಗಳು ಹುಂಡಿಯಲ್ಲಿ ಸಿಕ್ಕಿದ್ದು, ಇವುಗಳ ಒಟ್ಟಾರೆ ಮೌಲ್ಯ 50 ಕೋಟಿ ರೂಪಾಯಿಗಳಿಗೂ ಅಧಿಕ. ನಿಷೇಧಗೊಂಡಿರುವ ಕಾರಣ ಇವುಗಳನ್ನು ಯಾವುದೇ ಕಾರ್ಯಕ್ಕೂ ಬಳಸದಂತಹ ಪರಿಸ್ಥಿತಿ ದೇವಸ್ಥಾನದ ಆಡಳಿತ ಮಂಡಳಿಯದ್ದು.
ಆದರೆ ಭಕ್ತರ ಧಾರ್ಮಿಕ ನಂಬಿಕೆ ಪ್ರಶ್ನೆ ಇದಾಗಿರುವುದರಿಂದ ಈ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಮರಳಿಸಲು ವಿಶೇಷ ಅನುಮತಿ ನೀಡಬೇಕೆಂದು ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ನಿಷೇಧಿತ ನೋಟುಗಳಿಂದ ಬಂದಿರುವ ಈ ಹಣ ಬದಲಾವಣೆಯಾದರೆ ಅದನ್ನು ಅಭಿವೃದ್ದಿ ಕಾರ್ಯಗಳಿಗೆ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯಿದೆ.