ಅನೇಕ ಪೆಟ್ರೋಲ್ ಬಂಕ್ ಗಳು ಪೆಟ್ರೋಲ್, ಡಿಸೇಲ್ ಕಳ್ಳತನ ಮಾಡ್ತವೆ ಎಂಬ ಆರೋಪ ಪ್ರತಿ ದಿನ ಕೇಳಿ ಬರ್ತಿತ್ತು. ವಾಹನಕ್ಕೆ ಪೆಟ್ರೋಲ್ ಹಾಕುವ ವೇಳೆ ಬಂಕ್ ನಲ್ಲಿ ಮೋಸವಾಗ್ತಿತ್ತು. ಆದರೆ ಈಗ ಪೆಟ್ರೋಲ್ ಪಂಪ್ ಆಪರೇಟರ್‌ಗಳು ಹೊಸ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಅಡಿಯಲ್ಲಿ ಗ್ರಾಹಕರನ್ನು ಮೋಸಗೊಳಿಸಲು ಸಾಧ್ಯವಿಲ್ಲ. ಬಂಕ್ ಮೋಸದ ಬಗ್ಗೆ ಗ್ರಾಹಕರು ದೂರು ನೀಡಿದರೆ, ಪೆಟ್ರೋಲ್ ಬಂಕ್ ಗೆ ದಂಡದ ಜೊತೆಗೆ ಪರವಾನಗಿ ರದ್ದಾಗುವುದು.
ತೈಲ ಕಳ್ಳತನದ ಆಟವು ಸಣ್ಣ ನಗರಗಳಿಂದ ದೇಶದ ದೊಡ್ಡ ನಗರಗಳು ಮತ್ತು ಹಳ್ಳಿಗಳಿಗೆ ಹರಡಿದೆ. ಪೆಟ್ರೋಲ್ ಪಂಪ್ ಆಪರೇಟರ್‌ಗಳು ಗ್ರಾಹಕರನ್ನು ಹಲವು ರೀತಿಯಲ್ಲಿ ಮೋಸ ಮಾಡುತ್ತಾರೆ. ಪೆಟ್ರೋಲ್ ಬಂಕ್ ಮಾಲೀಕರು ಗ್ರಾಹಕರಿಗೆ 100 ರೂಪಾಯಿ, 500 ರೂಪಾಯಿ ಅಥವಾ 2000 ರೂಪಾಯಿ ತೈಲ ಹಾಕುವಂತೆ ಹೇಳ್ತಾರೆ. ಈ ವೇಳೆ ಚಿಪ್ ಅಳವಡಿಸಿ ಮೋಸ ಮಾಡ್ತಾರೆ. ಇದು ಅನೇಕರಿಗೆ ತಿಳಿದಿಲ್ಲ.
ಹೊಸ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಪ್ರಕಾರ, ಕಲಬೆರಕೆ ಅಥವಾ ನಕಲಿ ಉತ್ಪನ್ನಗಳ ತಯಾರಿಕೆ ಅಥವಾ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ನಿಗದಿಪಡಿಸಲಾಗಿದೆ. ಗ್ರಾಹಕರು ಕಡಿಮೆ ತೈಲ ನೀಡಲಾಗಿದೆ ಎಂದು ದೂರು ನೀಡಿದಲ್ಲಿ. ಮೊದಲ ಬಾರಿ ಅಪರಾಧ ಸಾಭೀತಾದ್ರೆ ದಂಡ ವಿಧಿಸಲಾಗುವುದು. ಎರಡನೇ ಬಾರಿ ಪರವಾನಗಿ ರದ್ದಾಗುತ್ತದೆ.