ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 1.41 ಕೋಟಿ ತೆರಿಗೆದಾರರಿಗೆ 1.64 ಲಕ್ಷ ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ತಿಳಿಸಿದೆ. ಇದರಲ್ಲಿ ವೈಯಕ್ತಿಕ ಆದಾಯ ತೆರಿಗೆ ಮರುಪಾವತಿ 53,070 ಕೋಟಿ ರೂಪಾಯಿ ಸೇರಿದೆ. ಈ ಮಧ್ಯೆ 1.10 ಲಕ್ಷ ಕೋಟಿ ರೂಪಾಯಿಗಳನ್ನು ಕಾರ್ಪೊರೇಟ್ ತೆರಿಗೆ ಮರುಪಾವತಿಯಾಗಿ ನೀಡಲಾಗಿದೆ.
ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಟ್ವೀಟ್ ಮಾಡಿದೆ. ಆದಾಯ ತೆರಿಗೆ ಇಲಾಖೆ ಏಪ್ರಿಲ್ 1, 2020ರಿಂದ ಜನವರಿ 4, 2021 ರ ನಡುವೆ 1.41 ಕೋಟಿಗೂ ಹೆಚ್ಚು ತೆರಿಗೆದಾರರಿಗೆ, 1,64,016 ಕೋಟಿ ರೂಪಾಯಿ ಮರುಪಾವತಿಸಿದೆ. ವೈಯಕ್ತಿಕ ಆದಾಯ ತೆರಿಗೆ ವಿಭಾಗದಲ್ಲಿ 1,38,85,044 ಪ್ರಕರಣಗಳಲ್ಲಿ 53,070 ಕೋಟಿ ರೂಪಾಯಿ ಮರುಪಾವತಿಸಿದೆ. ಕಾರ್ಪೊರೇಟ್ ತೆರಿಗೆ ಮರುಪಾವತಿಯ 2,06,847 ಪ್ರಕರಣಗಳಲ್ಲಿ 1,10,946 ಕೋಟಿ ರೂಪಾಯಿ ಮರುಪಾವತಿಸಿದೆ.
ಕೊರೊನಾ ವೈರಸ್ ಕಾರಣದಿಂದಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿ ಐಟಿಆರ್ ಸಲ್ಲಿಸುವ ಗಡುವನ್ನು ವಿಸ್ತರಿಸಿದೆ. ವೈಯಕ್ತಿಕ ತೆರಿಗೆದಾರರಿಗೆ ಐಟಿಆರ್ ಸಲ್ಲಿಸುವ ಗಡುವನ್ನು ಸರ್ಕಾರ ಜನವರಿ ಜನವರಿ 10 ರವರೆಗೆ ಮತ್ತು ಕಂಪನಿಗಳಿಗೆ ಫೆಬ್ರವರಿ 15 ರವರೆಗೆ ವಿಸ್ತರಿಸಿದೆ. ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್ ನಲ್ಲಿ ನಿಮಗೆ ಹಣ ಮರುಪಾವತಿ ಆಗಿದೆಯಾ ಎಂಬುದು ಗೊತ್ತಾಗುತ್ತದೆ.