ಭಾರತೀಯ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗ್ತಿದ್ದಂತೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಳಿಕೆ ಕಂಡಿವೆ. ದೆಹಲಿ ಚಿನ್ನದ ಮಾರುಕಟ್ಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಬೆಲೆ 614 ರೂಪಾಯಿ ಇಳಿದಿದೆ. 1 ಕೆಜಿ ಬೆಳ್ಳಿಯ ಬೆಲೆ 1,799 ರೂಪಾಯಿ ಇಳಿದಿದೆ.
ಜಾಗತಿಕ ಕರೆನ್ಸಿಯಲ್ಲಿನ ಏರುಪೇರಿನಿಂದಾಗಿ ಚಿನ್ನ-ಬೆಳ್ಳಿಯಲ್ಲಿ ಇಳಿಕೆ ಕಂಡು ಬಂದಿದೆ ಎಂದು ತಜ್ಞರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಇಳಿಯುವ ಸಾಧ್ಯತೆಯಿದೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಬುಧವಾರ 24 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 52,928 ರೂಪಾಯಿಯಿಂದ 52,314 ರೂಪಾಯಿಗೆ ಇಳಿದಿದೆ.
ಬುಧವಾರ ಬೆಳ್ಳಿ ಬೆಲೆಯಲ್ಲೂ ಕುಸಿತ ಕಂಡು ಬಂದಿದೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ 73,001 ರೂಪಾಯಿಯಿಂದ 71,202 ರೂಪಾಯಿಗೆ ಇಳಿದಿದೆ.