ಇಂದಿನ ಯುಗ ಸಂಪೂರ್ಣ ಡಿಜಿಟಲ್ ಆಗ್ತಿದೆ. ಹಣ ವರ್ಗಾವಣೆಗೆ ಜನರು ಬ್ಯಾಂಕ್ ಗೆ ಹೋಗ್ಬೇಕಿಲ್ಲ. ಮನೆಯಲ್ಲೇ ಕುಳಿತು ಡಿಜಿಟಲ್ ಮೂಲಕ ಹಣ ವರ್ಗಾವಣೆ ಮಾಡಬಹುದು. ಇದಕ್ಕಾಗಿ ಅನೇಕ ಅಪ್ಲಿಕೇಷನ್ ಗಳು ಲಭ್ಯವಿದೆ. ಆದ್ರೆ ಜನರು ಆತುರದಲ್ಲಿ ಹಣ ವರ್ಗಾವಣೆ ವೇಳೆ ತಪ್ಪು ಮಾಡ್ತಾರೆ. ಒಂದು ಖಾತೆಗೆ ಹೋಗುವ ಬದಲು ಹಣ ಇನ್ನೊಂದು ಖಾತೆಗೆ ಹೋಗಿರುತ್ತದೆ. ಆಗ ಏನು ಮಾಡ್ಬೇಕು ಎಂಬುದರ ವಿವರ ಇಲ್ಲಿದೆ.
ಹಣ ವರ್ಗಾವಣೆ ಮಾಡಿದ ತಕ್ಷಣ ಆ ವ್ಯಕ್ತಿಯನ್ನು ಸಂಪರ್ಕಿಸಿ ಹಣ ಬಂದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಿ. ಒಂದು ವೇಳೆ ಅವ್ರ ಖಾತೆಗೆ ಹಣ ಹೋಗಿದ್ದರೆ ನಿಮ್ಮ ವರ್ಗಾವಣೆ ಸರಿಯಾಗಿದೆ ಎಂದರ್ಥ. ಒಂದು ವೇಳೆ ಅವ್ರಿಗೆ ಹಣ ವರ್ಗಾವಣೆಯಾಗಿಲ್ಲವೆಂದ್ರೆ ಹಣ ಎಲ್ಲಿ ಹೋಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
ಆಕಸ್ಮಿಕವಾಗಿ ನಿಮ್ಮ ಹಣ ತಪ್ಪಾದ ವ್ಯಕ್ತಿಗೆ ಹೋಗಿದ್ದರೆ ಈ ಬಗ್ಗೆ ಮೊದಲು ಬ್ಯಾಂಕ್ ಗೆ ಲಿಖಿತ ದೂರು ನೀಡಬೇಕು. ಇದ್ರಲ್ಲಿ ವಹಿವಾಟಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಯಾವ ದಿನಾಂಕದಂದು ಹಣ ವರ್ಗಾವಣೆಯಾಗಿದೆ ಸೇರಿದಂತೆ ಎಲ್ಲ ಮಾಹಿತಿ ನೀಡಬೇಕು.
ತಪ್ಪು ಖಾತೆ ಸಂಖ್ಯೆ ಹಾಗೂ ತಪ್ಪು ಐಎಫ್ಎಸ್ ಸಿ ಕೋಡ್ ನಿಂದಾಗಿ ಹಣ ಯಾವ ಖಾತೆಗೂ ವರ್ಗಾವಣೆಯಾಗಿರುವುದಿಲ್ಲ. ಕೆಲ ದಿನಗಳ ನಂತ್ರ ನಿಮ್ಮ ಖಾತೆಗೆ ಹಣ ಬರುತ್ತದೆ. ಒಂದು ವೇಳೆ ಖಾತೆಗೆ ಹಣ ವಾಪಸ್ ಬರದೆ ಹೋದಲ್ಲಿ ನೀವು ಬ್ಯಾಂಕ್ ಮ್ಯಾನೇಜರ್ ಭೇಟಿಯಾಗಿ ಮಾಹಿತಿ ನೀಡಬೇಕಾಗುತ್ತದೆ.
ಒಂದು ವೇಳೆ ನಿಮ್ಮ ಹಣ ಬೇರೆ ಖಾತೆಗೆ ವರ್ಗವಾಗಿದ್ದರೆ ಹಣ ವಾಪಸ್ ಬರಲು ಸಮಯ ತೆಗೆದುಕೊಳ್ಳುತ್ತದೆ. ಎರಡು ತಿಂಗಳು ಹಿಡಿಯಬಹುದು. ನಿಮ್ಮ ಹಣವನ್ನು ಯಾವ ಬ್ಯಾಂಕ್ ನ ಯಾವ ಖಾತೆಗೆ ವರ್ಗಾಯಿಸಲಾಗಿದೆ ಎಂಬುದನ್ನು ನೀವು ಬ್ಯಾಂಕ್ ಜೊತೆ ಚರ್ಚಿಸಬೇಕಾಗುತ್ತದೆ.