ಕೊರೊನಾ ಮಹಾಮಾರಿಯಿಂದ ಜನ ಮನೆಯಿಂದ ಹೊರ ಬರೋದಿಕ್ಕೂ ಹೆದರುವಂತಾಗಿದೆ. ಯಾವುದೇ ಸರ್ಕಾರಿ ಕಚೇರಿಗೆ ತಮ್ಮ ಕೆಲಸ ಮಾಡಿಸಲಿಕ್ಕೆ ಹೋಗಬೇಕಾದರೂ ನೂರು ಸಲ ಯೋಚನೆ ಮಾಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕೂಡ ಅನೇಕ ಸರ್ಕಾರಿ ಕೆಲಸಗಳನ್ನು ಆನ್‌ಲೈನ್ ಮೂಲಕ ಮಾಡಿಕೊಳ್ಳಲು ಅವಕಾಶ ಮಾಡಿದೆ.
ಇದರಲ್ಲಿ ಚಾಲನಾ ಪರವಾನಗಿ ಕೂಡ ಒಂದು. ನೀವೇನಾದರೂ ಡ್ರೈವಿಂಗ್ ಲೈಸನ್ಸ್ ಗೆ ಅರ್ಜಿ ಸಲ್ಲಿಸಬೇಕು ಎಂದರೆ ಆರ್‌ಟಿಒ ಕಚೇರಿಗೆ ಹೋಗಬೇಕಾಗಿಲ್ಲ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ ಮತ್ತು ಚಾಲನಾ ಪರೀಕ್ಷೆಗಾಗಿ ಮಾತ್ರ ಆರ್‌ಟಿಒ ಕಚೇರಿಗೆ ಹೋಗಬೇಕು. ಆನ್‌ಲೈನ್‌ನಲ್ಲಿ ಕೇಳುವ ದಾಖಲೆಗಳನ್ನು ಒದಗಿಸಿದರೆ ಸಾಕು.
ಚಾಲನ ಪರವಾನಿಗೆಗೆ ಅಂತಲೇ ಸರ್ಕಾರದ ಅಧಿಕೃತ ವೆಬ್‌ಸೈಟ್ https://sarathi.parivahan.gov.in/ ಗೆ ಭೇಟಿ ನೀಡಿ. ಅಲ್ಲಿ ನಿಮ್ಮ ವೈಯಕ್ತಿಕ ದಾಖಲೆ ಹಾಗೂ ಡ್ರೈವಿಂಗ್ ಲೈಸನ್ಸ್‌ಗೆ ಬೇಕಾಗುವ ದಾಖಲೆಗಳು ಹಾಗು ಲೈಸನ್ಸ್ ಶುಲ್ಕವನ್ನು ನೀಡಿ. ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಪರೀಕ್ಷಾ ದಿನಾಂಕವನ್ನು ನೀಡಲಾಗುತ್ತದೆ. ಪರೀಕ್ಷೆಯಲ್ಲಿ ಪಾಸ್ ಆದ ನಂತರ ನೀವು ಬಯಸಿದ ವಾಹನದ ಲೈಸನ್ಸ್ ನಿಮ್ಮದಾಗಲಿದೆ.