ಇಂದಿನ ದಿನಗಳಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸುವವರು ಹೆಚ್ಚಾಗಿಯೇ ಇದ್ದಾರೆ. ಒಂದಿಷ್ಟು ಮಂದಿ ಹೊರತುಪಡಿಸಿದರೆ, ಉಳಿದೆಲ್ಲರೂ ಕೂಡ ಕಾರ್ಡ್ ಬಳಸುತ್ತಲೇ ಇರುತ್ತಾರೆ. ಕಾರ್ಡ್ ಬಳಸುವವರಿಗೊಂದು ಮಹತ್ವದ ಸುದ್ದಿಯನ್ನು ನೀಡಿದೆ ಆರ್‌ಬಿಐ.
ಅನೇಕರು ಸೈಬರ್ ವಂಚನೆಗೆ ಒಳಗಾಗಿರೋದನ್ನು ನೋಡಿದ್ದೇವೆ ಕೇಳಿದ್ದೇವೆ. ಅಂತರಾಷ್ಟ್ರೀಯ ವಹಿವಾಟು ಇರುವ ಕಾರ್ಡ್‌ದಾರರಲ್ಲಿ ಅನೇಕರಿಗೆ ಇಂತಹ ವಂಚನೆಗಳಾಗಿವೆ. ಇದನ್ನು ತಡೆಯೋದಿಕ್ಕಾಗಿ ಇದೀಗ ಆರ್‌ಬಿಐ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಇದರಿಂದ ಕ್ರೆಡಿಟ್, ಡೆಬಿಟ್ ಕಾರ್ಡ್‌ದಾರರು ವಂಚನೆಗೊಳಗಾಗೋದನ್ನು ಹಾಗೂ ಕಾರ್ಡ್ ವಂಚನೆಯನ್ನು ಪರಿಶೀಲಿಸಲು ಅನುಕೂಲವಾಗುತ್ತದೆ.
ಇದಕ್ಕಾಗಿ ಹಲವಾರು ನಿಯಮಗಳನ್ನು ಜಾರಿಗೆ ತರಲಾಗುತ್ತಿದ್ದು, ಇದು ಸೆಪ್ಟೆಂಬರ್ 30ರಿಂದ ಜಾರಿಗೆ ತರಲಾಗುತ್ತಿದೆ. ಇನ್ಮುಂದೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ದೇಶೀಯ ವಹಿವಾಟಿಗೆ ಸೀಮಿತಗೊಳಿಸುವಂತೆ ಹೇಳಿದೆ. ಗ್ರಾಹಕರ ಇಚ್ಚೆಯಂತೆ ತನ್ನ ಎಟಿಎಂ ವಹಿವಾಟಿನ ಮಿತಿಯನ್ನು ನಿರ್ಧರಿಸಬಹುದು. ಇನ್ನು ಕಾರ್ಡ್‌ದಾರ ಬಯಸಿದರೆ ಮಾತ್ರ ಅಂತರರಾಷ್ಟ್ರೀಯ ಕಾರ್ಡ್ ಸೇವೆಯನ್ನು ಬ್ಯಾಂಕ್ ನೀಡಬೇಕು. ಹೀಗೆ ಹಲವಾರು ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.