ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿರುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಬದಲಾಯಿಸುತ್ತಿದೆ. ಈ ನಿಯಮಗಳು ಸೆಪ್ಟೆಂಬರ್ 30 ರಿಂದ ಜಾರಿಗೆ ಬರಲಿವೆ.
ಹೌದು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇರುವವರು ನಿಮಗೆ ಅಗತ್ಯ ಇರುವ ಸೇವೆಗೆ ಅರ್ಜಿ ಹಾಕಿದರೆ ಮಾತ್ರ ಅಂತಹ ಸೇವೆ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಅಂದರೆ ಅಂತರರಾಷ್ಟ್ರೀಯ ವಹಿವಾಟುಗಳು, ಆನ್‌ಲೈನ್ ವಹಿವಾಟುಗಳು ಬೇಕು ಎಂದರೆ ಅಂತಹ ಸೇವೆಗಳಿಗೆ ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ದೇಶೀಯ ವಹಿವಾಟು ಅಥವಾ ಅಂತರರಾಷ್ಟ್ರೀಯ ವಹಿವಾಟು ಬೇಕು ಎಂದಾದರೆ ಅದನ್ನು ಗ್ರಾಹಕರು ನಿರ್ಧರಿಸಬಹುದು. ಇನ್ನು ಗ್ರಾಹಕ ಯಾವ ರೀತಿಯ ಸೇವೆ ನನ್ನ ಕಾರ್ಡ್‌ಗೆ ಲಭ್ಯವಿರಬೇಕು ಎಂಬುದನ್ನೂ ನಿರ್ಧರಿಸಬಹುದು. ಅಥವಾ ಯಾವುದಾದರೂ ಸೇವೆ ನಿಷ್ಕ್ರಿಯಗೊಳಿಸಬೇಕು ಎಂದಾದರೆ ಅದನ್ನೂ ನಿರ್ಧರಿಸಬಹುದು. ಒಟ್ಟಿನಲ್ಲಿ ಹಲವಾರು ಬದಲಾವಣೆಗಳನ್ನು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮಾಡುತ್ತಿದೆ.