ನೀವು ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತೀರಾ..? ಹಾಗಾದ್ರೆ ಈ ಸುದ್ದಿ ಓದಲೇಬೇಕು. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಈ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಬದಲಾಯಿಸುತ್ತಿದೆ. ಈ ನಿಯಮಗಳು ಇದೇ ತಿಂಗಳು 30 ರಿಂದ ಜಾರಿಗೆ ಬರಲಿವೆ.
ಹೌದು ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇರುವವರು ನಿಮಗೆ ಅಗತ್ಯ ಇರುವ ಸೇವೆಗೆ ಅರ್ಜಿ ಹಾಕಿದರೆ ಆ ಸೇವೆಯನ್ನು ಮಾತ್ರ ಅಳವಡಿಸಲಾಗುತ್ತದೆ. ಅಂದರೆ ಅಂತರರಾಷ್ಟ್ರೀಯ ವಹಿವಾಟುಗಳು, ಆನ್‌ಲೈನ್ ವಹಿವಾಟುಗಳು ಬೇಕು ಎಂದರೆ ಅಂತಹ ಸೇವೆಗಳಿಗೆ ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸಬೇಕು.
ದೇಶೀಯ ವಹಿವಾಟು ಅಥವಾ ಅಂತರರಾಷ್ಟ್ರೀಯ ವಹಿವಾಟು ಬೇಕು ಎಂದಾದರೆ ಅದನ್ನು ನಿರ್ಧರಿಸಬಹುದು. ಇನ್ನು ಗ್ರಾಹಕ ಯಾವ ರೀತಿಯ ಸೇವೆ ನನ್ನ ಕಾರ್ಡ್‌ಗೆ ಬೇಕು ಎಂಬುದನ್ನೂ ನಿರ್ಧರಿಸಬಹುದು. ಅಥವಾ ಯಾವುದಾದರೂ ಸೇವೆ ನಿಷ್ಕ್ರಿಯಗೊಳಿಸಬೇಕು ಎಂದಾದರೆ ಅದನ್ನೂ ನಿರ್ಧರಿಸಬಹುದು. ಒಟ್ನಲ್ಲಿ ಹಲವಾರು ಬದಲಾವಣೆಗಳನ್ನು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳಲ್ಲಿ ಮಾಡಲಾಗುತ್ತಿದೆ.