ಕೊರೊನಾ ಸಂದರ್ಭದಲ್ಲೂ ಭಾರತದ ಕೆಲ ಉದ್ಯಮಪತಿಗಳ ಸಂಪತ್ತಿನಲ್ಲಿ ಏರಿಕೆಯಾಗಿತ್ತು. ಅದರಲ್ಲೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮುಕೇಶ್ ಅಂಬಾನಿ ಹಾಗೂ ಅದಾನಿ ಸಮೂಹದ ಗೌತಮ್ ಅದಾನಿ ಅವರ ಸಂಪತ್ತು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು.
ಇದೀಗ ಗೌತಮ್ ಅದಾನಿ ಮಾಲೀಕತ್ವದ ಅದಾನಿ ಸಮೂಹ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದ್ದು, ಟಾಟಾ ಸಮೂಹ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಂತರ 100 ಬಿಲಿಯನ್ ಡಾಲರ್ ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ ಭಾರತದ ಮೂರನೇ ಕಂಪನಿಯಾಗಿ ಹೊರಹೊಮ್ಮಿದೆ.
ತಡರಾತ್ರಿ ಕರೆ ಮಾಡಿ ಸಂಸದ ಅನಂತಕುಮಾರ್ ಅವರಿಗೆ ಜೀವ ಬೆದರಿಕೆ
ಟಾಟಾ ಸಮೂಹದ ಪ್ರಸ್ತುತ ಮಾರುಕಟ್ಟೆ ಬಂಡವಾಳ ಮೌಲ್ಯ 242 ಬಿಲಿಯನ್ ಡಾಲರ್ ಗಳಾಗಿದ್ದು, ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮಾರುಕಟ್ಟೆ ಮೌಲ್ಯ 171 ಡಾಲರ್ ಗಳಾಗಿದೆ. ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹ 106.8 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದೆ.