ರಿಲಯನ್ಸ್ ಜಿಯೋ 4 ಜಿ ಇಂಟರ್ನೆಟ್ ಡೌನ್‌ಲೋಡ್ ವೇಗದಲ್ಲಿ ಮೊದಲ ಸ್ಥಾನ ಪಡೆದಿದೆ. ಜೂನ್ ತಿಂಗಳಲ್ಲಿ ಉಳಿದ ಟೆಲಿಕಾಂ ಕಂಪನಿಗಳನ್ನು ಹಿಂದಿಕ್ಕಿ ಜಿಯೋ ನಂಬರ್ ಒನ್ ಸ್ಥಾನಕ್ಕೇರಿದೆ. ಜಿಯೋ ಗ್ರಾಹಕರಿಗೆ ಅನುಕೂಲವಾಗಲು ಅನೇಕ ಪ್ರಿಪೇಯ್ಡ್ ಯೋಜನೆಗಳನ್ನು ಜಾರಿಗೆ ತಂದಿದೆ. 336 ದಿನಗಳ ಸಿಂಧುತ್ವದೊಂದಿಗೆ ಬರುವ ರಿಲಯನ್ಸ್ ಜಿಯೋನ ಪ್ರಿಪೇಯ್ಡ್ ಯೋಜನೆಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಜಿಯೋದ 2,121 ಮತ್ತು 1,299 ರೂಪಾಯಿ ಯೋಜನೆಗಳ ಸಿಂಧುತ್ವವು 336 ದಿನಗಳು. ರಿಲಯನ್ಸ್ ಜಿಯೋದ 1,299 ರೂಪಾಯಿ ಪ್ರೀಪೇಯ್ಡ್ ರೀಚಾರ್ಜ್ ಪ್ಯಾಕ್‌ನಲ್ಲಿ ಒಟ್ಟು 24 ಜಿಬಿ ಹೈಸ್ಪೀಡ್ ಡೇಟಾ ಲಭ್ಯವಿದೆ. ಹೆಚ್ಚಿನ ವೇಗದ ಡೇಟಾ ಮುಗಿದ ನಂತರ, ಗ್ರಾಹಕರು 64 ಕೆಬಿಪಿಎಸ್ ವೇಗದಲ್ಲಿ ಡೇಟಾ ಪಡೆಯಲಿದ್ದಾರೆ.
ಇತರ ನೆಟ್ವರ್ಕ್ ಗೆ ಕರೆ ಮಾಡಲು 12 ಸಾವಿರ ನಿಮಿಷ ಲಭ್ಯವಿದೆ. ಜಿಯೋ ನೆಟ್ವರ್ಕ್‌ನಲ್ಲಿ ಅನಿಯಮಿತ ಕರೆ ಲಭ್ಯವಿದೆ. ಗ್ರಾಹಕರು ಒಟ್ಟು 3,600 ಉಚಿತ ಎಸ್‌ಎಂಎಸ್ ಪಡೆಯಬಹುದು.
ಇನ್ನು ಜಿಯೋದ 2,121 ರೂಪಾಯಿ ರೀಚಾರ್ಜ್ ಪ್ಯಾಕ್‌ನ ಸಿಂಧುತ್ವವೂ 336 ದಿನಗಳು. ಈ ಪ್ಯಾಕ್‌ನಲ್ಲಿ ಪ್ರತಿದಿನ 1.5 ಜಿಬಿ ಡೇಟಾವನ್ನು ಪಡೆಯಬಹುದು. ಗ್ರಾಹಕರು ಒಟ್ಟು 504 ಜಿಬಿ ಡೇಟಾದ ಲಾಭವನ್ನು ಪಡೆಯಲಿದ್ದಾರೆ. ಜಿಯೋ ನೆಟ್‌ವರ್ಕ್‌ಗೆ ಕರೆ ಅನಿಯಮಿತವಾಗಿದೆ. ಗ್ರಾಹಕರು ಪ್ರತಿದಿನ 100 ಎಸ್‌ಎಂಎಸ್ ಉಚಿತವಾಗಿ ಪಡೆಯಲಿದ್ದಾರೆ.