ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪನಿಯ ಮುಖ್ಯಸ್ಥ ಮುಖೇಶ್ ಅಂಬಾನಿ ಹಲವಾರು ಪ್ರಮುಖ ಪ್ರಕಟಣೆಗಳನ್ನು ಮಾಡಿದ್ದಾರೆ. ಮುಂದಿನ ವರ್ಷದ ವೇಳೆಗೆ 5 ಜಿ ತಂತ್ರಜ್ಞಾನವನ್ನು ಪ್ರಾರಂಭಿಸುವುದಾಗಿ ಅವರು ಹೇಳಿದ್ದಾರೆ. ಗೂಗಲ್ ಮತ್ತು ಜಿಯೋ ಒಟ್ಟಾಗಿ ಆಪರೇಟಿಂಗ್ ಸಿಸ್ಟಮ್ ಅನ್ನು ರಚಿಸಲಿದ್ದು, ಇದು ಎಂಟ್ರಿ ಲೆವೆಲ್ 4 ಜಿ / 5 ಜಿ ಸ್ಮಾರ್ಟ್‌ಫೋನ್ ಆಗಿರುತ್ತದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.
ಜಿಯೋ ಮತ್ತು ಗೂಗಲ್ ಒಟ್ಟಾಗಿ ಭಾರತವನ್ನು 2 ಜಿ ಮುಕ್ತವಾಗಿಸುತ್ತದೆ ಎಂದು ಅಂಬಾನಿ ಭರವಸೆ ನೀಡಿದ್ದಾರೆ. ಸರ್ಚ್ ಎಂಜಿನ್ ಕಂಪನಿ ಗೂಗಲ್ 33,737 ಕೋಟಿ ರೂಪಾಯಿಗಳನ್ನು ಜಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಹೂಡಿಕೆ ಮಾಡಿದೆ ಎಂದು ಅಂಬಾನಿ ತಿಳಿಸಿದ್ದಾರೆ.
ವಾಟ್ಸಾಪ್ ತಂತ್ರಜ್ಞಾನದೊಂದಿಗೆ ಜಿಯೋ ಮಾರ್ಟ್ ಪರಿಚಯಿಸಲಾಗುವುದು ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಇದು ಭಾರತದ ಲಕ್ಷಾಂತರ ಕಿರಾಣಿ ಅಂಗಡಿಯವರಿಗೆ ನೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಯೋ ಮಾರ್ಟ್ ಬಗ್ಗೆ ಮಾಹಿತಿ ನೀಡಿದ ಇಶಾ ಅಂಬಾನಿ, ಆಕಾಶ್ ಅಂಬಾನಿ ಜೊತೆ ಸೇರಿ ಹೊಸ ಜಿಯೋ ಟಿವಿ ಪ್ಲಸ್‌ನ ಬಗ್ಗೆ ಮಾಹಿತಿ ನೀಡಿದರು. ಜಿಯೋ ಟಿವಿ ಪ್ಲಸ್ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್ ಮತ್ತು ಇತರ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಒಂದು ಅಪ್ಲಿಕೇಶನ್‌ನಲ್ಲಿ ತರಲಿದೆ.