ಬಿಎಸ್ ಎನ್ ಎಲ್ , ಜಿಯೋ, ಏರ್ಟೆಲ್ ಗೆ ಟಕ್ಕರ್ ನೀಡಲು ಮುಂದಾಗಿದೆ. ಜಿಯೋ ಫೈಬರ್ ಮತ್ತು ಏರ್ಟೆಲ್ ಎಕ್ಸ್ ಸ್ಟ್ರೀಮ್ ಫೈಬರ್ ಗೆ ಟಕ್ಕರ್ ನೀಡಲು ಬಿ ಎಸ್ ಎನ್ ಎಲ್ ಫೈಬರ್ ಬೇಸಿಕ್ ಪ್ಲಸ್ ಯೋಜನೆಯ ಘೋಷಣೆ ಮಾಡಿದೆ. ಈ ಯೋಜನೆ ಬೆಲೆ 599 ರೂಪಾಯಿ.
ಈ ಬಿ ಎಸ್ ಎನ್ ಎಲ್ ಫೈಬರ್ ಬೇಸಿಕ್ ಪ್ಲಸ್ ನಲ್ಲಿ ಗ್ರಾಹಕರಿಗೆ 60ಎಂಬಿಪಿಎಸ್ ವೇಗ ಸಿಗಲಿದೆ. ಇದ್ರ ಜೊತೆ ಅನಿಯಮಿತ ಡೇಟಾ ಸಿಗಲಿದೆ. ಈ ಯೋಜನೆ ದೇಶದ ಎಲ್ಲ ಗ್ರಾಹಕರಿಗೂ ಲಭ್ಯವಾಗಲಿದೆ. ಇದನ್ನು ಕಂಪನಿ ಅನಿಯಮಿತ ಡೇಟಾ ಪ್ಯಾಕ್ ಎನ್ನುತ್ತಿದೆ. ಆದ್ರೆ 3300ಜಿಬಿ ಡೇಟಾ ನೀಡಲಿದೆ. ಇದು ಮುಗಿದ ಮೇಲೆ 2 ಎಂಬಿಪಿಎಸ್ ಸ್ಪೀಡ್ ಸಿಗಲಿದೆ. ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ಕೂಡ ಸಿಗ್ತಿದೆ.
ಇದಲ್ಲದೆ ಬಿ ಎಸ್ ಎನ್ ಎಲ್ 499 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಇದು ನವೆಂಬರ್ 11ರಿಂದ ಎಲ್ಲ ಗ್ರಾಹಕರಿಗೆ ಲಭ್ಯವಾಗಿದೆ. ಇದ್ರಲ್ಲಿ ಇನ್ಮುಂದೆ 30ಎಂಬಿಪಿಎಸ್ ವೇಗದ ಡೇಟಾ ಸಿಗಲಿದೆ.