ಮುಕೇಶ್ ಅಂಬಾನಿ ಒಡೆತನದ ಜಿಯೋ ಕಂಪನಿ ವಿದೇಶಿ ನೇರ ಹೂಡಿಕೆ ಹೆಚ್ಚಿಸಿಕೊಳ್ಳುತ್ತಲೇ ಇದೆ. ಕಳೆದ ಆರು ವಾರಗಳ ಅವಧಿಯಲ್ಲಿ ಜಿಯೋ ಮೇಲೆ ಆರು ಹೂಡಿಕೆಗಳು ಆಗಿವೆ. ಇದೀಗ ಅಬುಧಾಬಿ ಮೂಲದ ಸಾವರಿನ್ ಇನ್ವೆಸ್ಟರ್ ಮುಬದಲ ಸಂಸ್ಥೆ ಇದರ ಮೇಲೆ ಹೂಡಿಕೆ ಮಾಡಿದೆ.
ಹೌದು, ಮುಬದಲ ಸಂಸ್ಥೆ ಜಿಯೋದ ಶೇ.1.85 ಪಾಲನ್ನು 9,093 ಕೋಟಿ ರೂಪಾಯಿಗೆ ಖರೀದಿಸಿದೆಯಂತೆ. ಈ ಹಿಂದೆ ಮೊದಲ ಬಾರಿಗೆ ಅಮೆರಿಕದ ಟೆಕ್ ಸಂಸ್ಥೆ ಫೇಸ್ಬುಕ್ ಜಿಯೋದ ಶೇ.9.99 ಪಾಲನ್ನು ಖರೀದಿಸಿತ್ತು. ನಂತರ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ.1 ಪಾಲನ್ನು ಖರೀದಿಸಿದರೆ, ವಿಸ್ತಾ ಸಂಸ್ಥೆ ಶೇ.2.3 ಪಾಲನ್ನು ಖರೀದಿಸಿದೆ.
ಇನ್ನು ಶೇ.1.34 ಪಾಲನ್ನು ಜನರಲ್ ಅಟ್ಲಾಂಟಿಕ್ ಹಾಗೂ ಶೇ.2.32ಪಾಲನ್ನು ಕೆಕೆಆರ್ ಖರೀದಿಸಿತ್ತು. ಇದೀಗ ಮುಬದಲ ಸಂಸ್ಥೆ ಜಿಯೋದ ಶೇ.1.85 ಪಾಲನ್ನು ಖರೀದಿಸಿದೆ.
ಇನ್ನು ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮುಕೇಶ್ ಅಂಬಾನಿ ಅಬುಧಾಬಿ ಸಂಸ್ಥೆ ಜಿಯೋ ಮೇಲೆ ಹೂಡಿಕೆ ಮಾಡುತ್ತಿರುವುದು ತುಂಬಾ ಖುಷಿ ವಿಚಾರ. ಈ ಬೆಳವಣಿಗೆ ಮುಂದೆ ಡಿಜಿಟಲ್ ಇಂಡಿಯ ಯೋಜನೆ ಸಂಪೂರ್ಣವಾಗಿ ಜಾರಿಗೆ ಬರಲು ಸಹಕಾರಿಯಾಗಲಿದೆ ಎಂದಿದ್ದಾರೆ.