ಇತ್ತೀಚೆಗೆ ಹೆಚ್ಚು ಸದ್ದಾಗುತ್ತಿರುವ ವಿಚಾರ ಎಂದರೆ ಅದು ಟಿಆರ್‌ಪಿ ಗಿಮಿಕ್. ಈಗಾಗಲೇ ಟಿಆರ್‌ಪಿ ತಿರುಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಾಠಿಯ ಎರಡು ನ್ಯೂಸ್ ಚಾನಲ್‌ಗಳ ಮಾಲೀಕರನ್ನು ಬಂಧಿಸಲಾಗಿದೆ. ಇದರ ಜೊತೆಗೆ ರಿಪಬ್ಲಿಕ್ ಟಿವಿಯ ಆರು ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇಷ್ಟೆಲ್ಲ ಘಟನೆಯ ನಂತರ ಇದೀಗ ಪಾರ್ಲೆ ಬಿಸ್ಕೇಟ್ ಕಂಪನಿ ಹಾಗೂ ಬಜಾಜ್ ಕಂಪನಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಆಕ್ರಮಕಾರಿ ಅಥವಾ ಸುದ್ದಿಯನ್ನು ಅತಿರೇಕಕ್ಕೆ ತೆಗೆದುಕೊಂಡು ಹೋಗುವಂತಹ ನ್ಯೂಸ್ ಚಾನಲ್‌ಗಳಿಗೆ ಜಾಹಿರಾತನ್ನು ನೀಡದಿರಲು ಈ ಕಂಪನಿಗಳು ನಿರ್ಧಾರ ಮಾಡಿದ್ದಾವೆ ಎನ್ನಲಾಗಿದೆ. ಸಮಾಜಕ್ಕೆ ಅಪಾಯಕಾರಿ ವಿಚಾರಗಳನ್ನು ತಿಳಿಸುವ ಕಂಪನಿಗಳಿಗೆ ಇನ್ನು ಮುಂದೆ ಜಾಹಿರಾತು ನೀಡಬಾರದೆಂದು ನಿರ್ಧಾರ ಮಾಡಲಾಗಿದೆಯಂತೆ.
ಇನ್ನು ಬಜಾಜ್ ಕಂಪನಿ ಈಗಾಗಲೇ ಮೂರು ಚಾನಲ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆಯಂತೆ. ಯಾವ ನ್ಯೂಸ್ ಚಾನಲ್ ಸಮಾಜಕ್ಕೆ ವಿಷದ ಮೂಲಕವಾಗಿ ವಿವಾದವನ್ನು ತೀರ್ಪಡಿಸುತ್ತಿದೆಯೋ ಅಂತವರ ಜೊತೆ ನಾವು ಎಂದಿಗೂ ಇರುವುದಿಲ್ಲ ಎಂದು ಬಜಾಜ್ ಆಟೋ ಎಂಡಿ ರಾಜೀವ್ ಬಜಾಜ್ ಹೇಳಿದ್ದಾರೆ. ಹೀಗೆ ಟಿ.ಆರ್.ಪಿ. ನೋಡಿಕೊಂಡು ಜಾಹಿರಾತುಗಳನ್ನು ನೀಡುವ ಮೂಲಕ ನಾವು ಅವರ ಅಪರಾಧಗಳಲ್ಲಿ ಭಾಗಿಯಾದಂತೆ ಎಂಬರ್ಥದಲ್ಲಿ ಹೇಳಿದ್ದಾರೆ. ಇನ್ನು ಈ ಎರಡು ಕಂಪನಿಗಳ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.