![](https://kannadadunia.com/wp-content/uploads/2020/03/11_03_2020-gold_price_20100009.jpg)
ಬಂಗಾರದ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ. ಗುರುವಾರ ಸತತ 8 ನೇ ವಹಿವಾಟಿನಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಎಂಸಿಎಕ್ಸ್ ನ ಆರಂಭಿಕ ವಹಿವಾಟಿನಲ್ಲಿ 10 ಗ್ರಾಂ ಚಿನ್ನದ ಬೆಲೆ 53,429 ರ ದಾಖಲೆಯ ಮಟ್ಟಕ್ಕೆ ಏರಿದೆ. ಈ ಮೂಲಕ 8 ದಿನಗಳಲ್ಲಿ ಚಿನ್ನವು 10 ಗ್ರಾಂಗೆ ಸುಮಾರು 5,500 ರಷ್ಟು ಹೆಚ್ಚಾಗಿದೆ.
ಎಂಸಿಎಕ್ಸ್ ನಲ್ಲಿ ಇಂದು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 65,212 ರೂಪಾಯಿಯಾಗಿದೆ. ಬುಧವಾರ, ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಶೇಕಡಾ 99.9 ರಷ್ಟು ಶುದ್ಧ ಬಂಗಾರದ ಬೆಲೆ ಹತ್ತು ಗ್ರಾಂಗೆ 53,087 ರೂಪಾಯಿಗಳಿಂದ 53,797 ರೂಪಾಯಿಗೆ ಏರಿಕೆ ಕಂಡಿತ್ತು. ಪ್ರತಿ ಹತ್ತು ಗ್ರಾಂಗೆ 710 ರೂಪಾಯಿ ಹೆಚ್ಚಾಗಿತ್ತು.
ದುರ್ಬಲಗೊಂಡ ಡಾಲರ್, ಕಡಿಮೆ ಬಡ್ಡಿ ದರಗಳು ಮತ್ತು ದೇಶ ಮತ್ತು ಪ್ರಪಂಚದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳಿಂದಾಗಿ ಚಿನ್ನದ ಸುರಕ್ಷಿತ ಹೂಡಿಕೆಯ ಬೇಡಿಕೆ ಹೆಚ್ಚಾಗಿದೆ.