ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಖಾಸಗಿ ವಲಯದ ಯೆಸ್ ಬ್ಯಾಂಕ್ ಡಿಜಿಟಲ್ ಉಳಿತಾಯ ಖಾತೆಯನ್ನು ಪ್ರಾರಂಭಿಸಿದೆ. ಇದ್ರಲ್ಲಿ ಗ್ರಾಹಕರು ಬ್ಯಾಂಕ್ ಗೆ ಹೋಗಬೇಕಾಗಿಲ್ಲ. ಈ ಖಾತೆಯನ್ನು ಇ-ಕೆವೈಸಿ ಮತ್ತು ವಿಡಿಯೋ ಪರಿಶೀಲನೆಯ ಮೂಲಕ ತೆರೆಯಬಹುದು.
ಡಿಜಿಟಲ್ ಉಳಿತಾಯ ಖಾತೆಯು ವರ್ಚುವಲ್ ಡೆಬಿಟ್ ಕಾರ್ಡ್‌ನೊಂದಿಗೆ ಬರುತ್ತದೆ. ಇದರ ಸಹಾಯದಿಂದ ಗ್ರಾಹಕರಿಗೆ 100 ಕ್ಕೂ ಹೆಚ್ಚು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಬ್ಯಾಂಕ್ ತಿಳಿಸಿದೆ. ಬ್ಯಾಂಕಿನ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ವಹಿವಾಟುಗಳು, ನಿಧಿ ವರ್ಗಾವಣೆ ಮತ್ತು ಆನ್‌ಲೈನ್ ಶಾಪಿಂಗ್ ಮಾಡಬಹುದು.
ಬ್ಯಾಂಕ್ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, 18 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಪೋರ್ಟಲ್ ಮೂಲಕ ಡಿಜಿಟಲ್ ಉಳಿತಾಯ ಖಾತೆಯನ್ನು ತೆರೆಯಬಹುದು. ಗ್ರಾಹಕರು https://www.yesbank.in/personal-banking/yes-inducation/savings-account/digital-savings-account ನಲ್ಲಿ ಇ-ಕೆವೈಸಿಗೆ ಕ್ಲಿಕ್ ಮಾಡಬಹುದು. ಆನ್‌ಲೈನ್ ರೂಪದಲ್ಲಿ ಆಧಾರ್, ಪ್ಯಾನ್, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಒಟಿಪಿ ಯೊಂದಿಗೆ ಭರ್ತಿ ಮಾಡಿ ಖಾತೆ ತೆರೆಯಬೇಕು. ವಿಡಿಯೋ ಮೂಲಕ ದಾಖಲೆಗಳನ್ನು ತೋರಿಸಬೇಕಾಗುತ್ತದೆ.