ಖಾಸಗಿ ವಲಯದ ದೊಡ್ಡ ಬ್ಯಾಂಕ್ ಆರ್‌ಬಿಎಲ್ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಬ್ಯಾಂಕ್ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಲು ನಿರ್ಧರಿಸಿದೆ. ಎಲ್ಲಾ ಅವಧಿಯ ಸಾಲಗಳ ಮೇಲಿನ ಬಡ್ಡಿದರಗಳನ್ನು ಶೇಕಡಾ 0.10 ರಷ್ಟು ಕಡಿಮೆ ಮಾಡಿದೆ.
ಜುಲೈ 22 ರಿಂದ ಹೊಸ ದರಗಳು ಜಾರಿಗೆ ಬಂದಿವೆ. ಮೇ 22 ರಂದು ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಶೇಕಡಾ 0.40 ರಷ್ಟು ಇಳಿಸಿತ್ತು. ಇದರ ನಂತರ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಯುಕೋ ಬ್ಯಾಂಕ್ ಈಗಾಗಲೇ ರೆಪೊ ಮತ್ತು ಎಂಸಿಎಲ್ಆರ್ ಸಂಬಂಧಿಸಿದ ಸಾಲ ದರವನ್ನು ಕಡಿಮೆ ಮಾಡಿವೆ.
ಆರ್‌ಬಿಐ ಇತ್ತೀಚೆಗೆ ಉಳಿತಾಯ ಖಾತೆಯ ಬಡ್ಡಿದರಗಳನ್ನು ಬದಲಾಯಿಸಿದೆ. ಹೊಸ ದರಗಳು ಆಗಸ್ಟ್ 1 ರಿಂದ ಜಾರಿಗೆ ಬರಲಿವೆ. ಒಂದು ಲಕ್ಷ ರೂಪಾಯಿವರೆಗಿನ ಉಳಿತಾಯ ಖಾತೆ ಠೇವಣಿಗಳ ಮೇಲೆ ವಾರ್ಷಿಕವಾಗಿ ಶೇಕಡಾ 4.75ರಷ್ಟು ಬಡ್ಡಿ ಸಿಗಲಿದೆ. 1-10 ಲಕ್ಷ ರೂಪಾಯಿವರೆಗಿನ ಠೇವಣಿಗಳ ಮೇಲೆ ಶೇಕಡಾ 6 ಬಡ್ಡಿ ಸಿಗಲಿದೆ.