ಸಾಮಾನ್ಯವಾಗಿ ನಮ್ಮ ಮನೆಗಳಿಗೆ ಗ್ಯಾಸ್ ಏಜನ್ಸಿಗಳೇ ಸಿಲಿಂಡರ್ನ ತಂದು ಕೊಡುತ್ತವೆ. ಅದಕ್ಕೆ ಹೆಚ್ಚಿನ ಶುಲ್ಕವನ್ನು ವಿಧಿಸುತ್ತವೆ. ಆದರೆ ನೀವೆ ಗೋಡೌನ್ ಬಳಿ ಹೋಗಿ ಸಿಲಿಂಡರ್ ಪಡೆದರೆ ಶುಲ್ಕ ನೀಡುವ ಅಗತ್ಯ ಇರುವುದಿಲ್ಲ.
ಹೌದು, ಏಜನ್ಸಿ ಆಪರೇಟರ್ಗಳು ನಿಮಗೆ ಸಿಲಿಂಡರ್ ತಂದುಕೊಟ್ಟಿಲ್ಲ ಎಂದರೆ ಗೋಡೌನ್ಗೆ ಹೋಗಿ ನೀವೆ ಸಿಲಿಂಡರ್ ಪಡೆದರೆ ಏಜನ್ಸಿಗೆ ನೀಡುವ 19 ರೂಪಾಯಿ 50 ಪೈಸೆಯನ್ನು ಹಿಂಪಡೆಬಹುದು. ಮನೆಗೆ ಸಿಲಿಂಡರ್ ಅನ್ನು ತಂದು ಕೊಟ್ಟರೆ ಈ ಹಣವನ್ನು ಏಜನ್ಸಿಯವರಿಗೆ ಪಾವತಿಸಬೇಕಾಗುತ್ತದೆ. ಆದರೆ ನೀವೆ ಇದನ್ನು ಪಡೆದರೆ ಈ ಹಣವನ್ನು ವಾಪಸ್ ಪಡೆಯಬಹುದು.
ಇನ್ನು ಈ ಹಣವನ್ನು ಏಜನ್ಸಿ ಕೊಡದೇ ಇದ್ದರೆ ನೀವು 18002333555 ಟೋಲ್ ಫ್ರೀ ನಂಬರ್ಗೆ ಕರೆ ಮಾಡಿ ದೂರು ನೀಡಬಹುದು.