alex Certify ‘ಗೃಹ ಸಾಲ’ ಪಡೆಯುವವರಿಗೆ SBI ವಿಶೇಷ ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗೃಹ ಸಾಲ’ ಪಡೆಯುವವರಿಗೆ SBI ವಿಶೇಷ ಕೊಡುಗೆ

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗೃಹ ಸಾಲ ಪಡೆಯುವ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದ್ದು ಇದರಿಂದ ಬಡ್ಡಿದರ ಕಡಿಮೆಯಾಗಲಿದೆ.

ಗೃಹ ಸಾಲದ ಮೇಲಿನ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಲಾಗಿದ್ದು, ಇದರ ಜೊತೆಗೆ 30 ಲಕ್ಷ ರೂ. ಗಳಿಗಿಂತ ಹೆಚ್ಚು ಮತ್ತು 1 ಕೋಟಿ ರೂ. ಒಳಗಿನ ಮೊತ್ತದ ಸಾಲ ಪಡೆಯುವ ಗ್ರಾಹಕರ ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಹೆಚ್ಚುವರಿಯಾಗಿ 0.10 ಬಡ್ಡಿದರ ಕಡಿಮೆಯಾಗಲಿದೆ.

ಮತ್ತೊಂದು ಕೊಡುಗೆಯನ್ನು ಸಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದ್ದು, ಬ್ಯಾಂಕಿನ ಯುನೋ ಆಪ್ ಮೂಲಕ ಅರ್ಜಿ ಸಲ್ಲಿಸಿದರೆ ಹೆಚ್ಚುವರಿಯಾಗಿ 0.5 ರಷ್ಟು ಕಡಿಮೆಯಾಗಲಿದೆ. ಗ್ರಾಹಕರು ಈ ಕೊಡುಗೆಗಳ ಲಾಭ ಪಡೆಯಬೇಕೆಂದು ಕೋರಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...