ಗೂಗಲ್ ತನ್ನ ಮೀಟ್ ಅಪ್ಲಿಕೇಶನ್‌ನಲ್ಲಿ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಇನ್ಮುಂದೆ ಗೂಗಲ್ ಮೀಟ್ ನಲ್ಲಿ ಒಂದೇ ಬಾರಿ 49 ಮಂದಿ ಪಾಲ್ಗೊಳ್ಳಬಹುದಾಗಿದೆ. ಆಟೋ ಮತ್ತು ಟೈಲ್ ವ್ಯೂನ ಸೆಟ್ಟಿಂಗ್ ಬದಲಾವಣೆ ಮಾಡಬೇಕಾಗುತ್ತದೆ.
ಟೈಲ್ ವ್ಯೂನಲ್ಲಿ ನಿಮ್ಮನ್ನು ನೀವು ನೋಡಬಹುದಾಗಿದೆ. ಸ್ಕ್ರೀನ್‌ಶಾಟ್‌ಗಳು ಅಥವಾ ಫೋಟೋಗಳನ್ನು ತೆಗೆದುಕೊಂಡಾಗ ದೊಡ್ಡ ಗುಂಪಿನ ಭಾಗವಾಗಿದ್ದೀರಿ ಎಂಬುದು ಗೊತ್ತಾಗುತ್ತದೆ ಎಂದು ಗೂಗಲ್ ಹೇಳಿದೆ. ಗೂಗಲ್ ಪ್ರಕಾರ, ಹೆಚ್ಚಿನ ಜನರಿದ್ದರೆ, ನೀವು ಸಂಖ್ಯೆಯನ್ನು ಹೆಚ್ಚಿಸಬಹುದು. ಇಂಟರ್ನೆಟ್ ಸಂಪರ್ಕ ದುರ್ಬಲವಾಗಿದ್ದರೆ, ಸಂಖ್ಯೆಯನ್ನು ಕಡಿಮೆ ಮಾಡಬಹುದು.
ವಿಡಿಯೋ ಕರೆ ವೇಳೆ ಲೈಟ್ ಸಮಸ್ಯೆಯಾಗದಿರಲಿ ಎನ್ನುವ ಕಾರಣಕ್ಕೆ ಇದಕ್ಕೂ ಗೂಗಲ್ ಮೀಟ್ ಸೆಟ್ಟಿಂಗ್ ಬದಲಿಸಿದೆ. ಹಿಂಭಾಗ ಬ್ಲರ್ ಆಗುವಂತೆ ಮಾಡುವ ಸೆಟ್ಟಿಂಗ್ ನೀಡಲಾಗಿದೆಯಂತೆ. ಜಿ ಮೇಲ್ ಇನ್ ಬಾಕ್ಸ್ ನಿಂದ ಹೊರ ಬಂದು ನೀವು ಗೂಗಲ್ ಮೀಟ್ ನಲ್ಲಿ ಪಾಲ್ಗೊಳ್ಳಬೇಕಾಗಿಲ್ಲ. ಸೈಡ್ ಬಾರ್ ನಲ್ಲಿರುವ ಸ್ಟಾರ್ಟ್ ಎ ಮೀಟಿಂಗ್, ಜಾಯಿನ್ ಎ ಮೀಟಿಂಗ್ ಬಟನ್ ಕ್ಲಿಕ್ ಮಾಡಿ ನೇರವಾಗಿ ಮೀಟಿಂಗ್ ನಲ್ಲಿ ಪಾಲ್ಗೊಳ್ಳಬಹುದು.