
ಗೂಗಲ್ ಬಳಕೆದಾರರೇ ಇತ್ತ ಗಮನಿಸಿ. ನಿಮಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. 1 ಜೂನ್ 2021 ರಿಂದ ಗೂಗಲ್ ಹೊಸ ನೀತಿ ಜಾರಿಗೆ ತರಲಾಗುತ್ತಿದೆ. ಈ ನೀತಿಯ ಪ್ರಕಾರ ನೀವು ನಿಮ್ಮ ಜಿಮೇಲ್ ಖಾತೆಗಳನ್ನು ಬಳಸದೇ ನಿಷ್ಕ್ರಿಯಗೊಳಿಸಿದ್ದರೆ ಅಂತಹ ಖಾತೆಗಳನ್ನು ಮುಚ್ಚಲು ನಿರ್ಧಾರ ಮಾಡಲಾಗಿದೆ.
ಹೌದು, ಗೂಗಲ್‌ನ ಹೊಸ ನೀತಿ ಜಾರಿಗೆ ಬರುತ್ತಿದೆ. ನಿಮ್ಮ ಗೂಗಲ್ ಫೋಟೋ, ಗೂಗಲ್ ಡ್ರೈವ್, ಅಥವಾ ಜಿಮೇಲ್ ಖಾತೆಗಳಲ್ಲಿ ಹೆಚ್ಚು ಚಟುವಟಿಕೆ ಇಲ್ಲ ಎಂದಾದರೆ ಅಂತಹ ಖಾತೆಗಳನ್ನು ಮುಚ್ಚಲಾಗುತ್ತದೆ. ಈ ಖಾತೆಗಳಿಂದ ನಿಮ್ಮ ಎಲ್ಲಾ ಮಾಹಿತಿಗಳನ್ನು ತೆಗೆದು ಹಾಕಲಾಗುತ್ತದೆ.
ಹೀಗಾಗಿ ನಿಮ್ಮ ಗೂಗಲ್ ಖಾತೆಗಳಿಗೆ ಆಗಾಗ ಭೇಟಿ ನೀಡುವುದರ ಜೊತೆಗೆ ಗೂಗಲ್ ಡ್ರೈವ್ ಅಥವಾ ಫೋಟೋಗೆ ಹೋಗಿ ಪರಿಶೀಲನೆ ಮಾಡಿ. ಇನ್ನು ಖಾತೆಗಳನ್ನು ಮುಚ್ಚುವಂತಹ ಸಂದರ್ಭದಲ್ಲಿ ಆ ಖಾತೆಯ ಬಳಕೆದಾರರಿಗೆ ಮುಂಚೆಯೇ ತಿಳಿಸಲಾಗುತ್ತದೆ.